Telegram Join My Telegram WhatsApp Join My WhatsApp

Karnataka High Court Recruitment 2026: 70 ಹುದ್ದೆಗಳ ಭರ್ತಿ | ₹1.4 ಲಕ್ಷ ಸಂಬಳ | Degree ಇದ್ದರೆ ಸಾಕು!

Karnataka High Court ವತಿಯಿಂದ 2026 ನೇಮಕಾತಿ ಪ್ರಕಟಣೆ ಹೊರಬಿದ್ದಿದ್ದು, ಒಟ್ಟು 70 Assistant Court Secretary ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು 15 ಏಪ್ರಿಲ್ 2026ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Karnataka High Court Recruitment: ಹುದ್ದೆಗಳ ವಿವರ

  • Assistant Court Secretary (RPC) – 59 ಹುದ್ದೆಗಳು

  • Assistant Court Secretary (KKR) – 11 ಹುದ್ದೆಗಳು

  • ಒಟ್ಟು ಹುದ್ದೆಗಳು – 70

ವೇತನ:

  • ತಿಂಗಳಿಗೆ ₹44,900 ರಿಂದ ₹1,42,400 ವರೆಗೆ ಸಂಬಳ

ವಿದ್ಯಾರ್ಹತೆ:

ಅಭ್ಯರ್ಥಿಗಳು ಕೆಳಗಿನ ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು:

  • ಕಾನೂನು ಪದವಿ

  • ವಿಜ್ಞಾನ / ಕಲಾ / ವಾಣಿಜ್ಯ ಪದವಿ

  • ವ್ಯವಹಾರ ನಿರ್ವಹಣಾ ಪದವಿ

  • ಕಂಪ್ಯೂಟರ್ ಅಪ್ಲಿಕೇಶನ್

  • ಎಂಬಿಎ/MBA

(ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ)

ಕಲ್ಯಾಣ ಕರ್ನಾಟಕ ಪ್ರದೇಶದ 11 ಹುದ್ದೆಗಳ ವಿವರ (ಬ್ಯಾಕ್‌ಲಾಗ್ ಸೇರಿ):

ವರ್ಗ ಮೀಸಲು ರಹಿತ ಮಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಕನ್ನಡ ಮಾಧ್ಯಮ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿ ಯೋಜನೆ ನಿರಾಶ್ರಿತ ಅಭ್ಯರ್ಥಿ ಮಾಜಿ ಸೈನಿಕ ತೃತೀಯ ಲಿಂಗ ಒಟ್ಟು
ಸಾಮಾನ್ಯ ಅಭ್ಯರ್ಥಿ 1 1 1* 2+1*
ಪರಿಶಿಷ್ಟ ಜಾತಿ 1+1* 1* 1+2*
ಪರಿಶಿಷ್ಟ ಪಂಗಡ 1* 1*
ಪ್ರವರ್ಗ – 1 1* 1*
ಪ್ರವರ್ಗ – 2 (a) 1* 1*
ಪ್ರವರ್ಗ – 2 (b) 1* 1*
ಪ್ರವರ್ಗ – 3 (a) 1 1
ಪ್ರವರ್ಗ – 3 (b)
ಒಟ್ಟು 3+4* 1+2* 1* 4+7*

ಟಿಪ್ಪಣಿ:
1. (*) ಚಿನ್ಹೆ ಬ್ಯಾಕ್ ಲಾಗ್ ಹುದ್ದೆಗಳನ್ನು ಸುಚಿಸುತ್ತದೆ.
2. ಮೇಲಿನ ವರ್ಗೀಕರಣವನ್ನು ಸರ್ಕಾರದ ಆದೇಶದ ಸಂಖ್ಯೆ ಸಿಆಸುಇ 01 ಸೆಹಿಮ 2026 ದಿನಾಂಕ 27.02.2026 ಪ್ರಕಾರ ಮಾಡಲಾಗಿದೆ.

Karnataka High Court Recruitment ಇತರ ಮೀಸಲಾತಿಗಳು – ಸಂಪೂರ್ಣ ವಿವರ

ಕರ್ನಾಟಕ ಸರ್ಕಾರದ ನೇಮಕಾತಿಗಳಲ್ಲಿ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಗ್ರಾಮೀಣ ಮೀಸಲಾತಿ, ಕನ್ನಡ ಮಾಧ್ಯಮ ಮೀಸಲಾತಿ ಹಾಗೂ ಇತರ ವಿಶೇಷ ಮೀಸಲಾತಿಗಳು ಸೇರಿವೆ.

1. ಗ್ರಾಮೀಣ ಮೀಸಲಾತಿ

ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಸರ್ಕಾರದಿಂದ ವಿಶೇಷ ಅವಕಾಶ ನೀಡಲಾಗಿದೆ.

  • ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ 1ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರಬೇಕು.
  • ಈ ಮೀಸಲಾತಿ ಪಡೆಯಲು ಅರ್ಹ ಅಭ್ಯರ್ಥಿಗಳು ಸಂಬಂಧಿತ ಪ್ರಮಾಣಪತ್ರವನ್ನು ಹೊಂದಿರಬೇಕು.

2. ಕನ್ನಡ ಮಾಧ್ಯಮ ಮೀಸಲಾತಿ

ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ ಕೂಡ ವಿಶೇಷ ಮೀಸಲಾತಿ ನೀಡಲಾಗಿದೆ.

  • 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರಬೇಕು.
  • ಈ ಅರ್ಹತೆಯನ್ನು ದೃಢೀಕರಿಸಲು ಸಂಬಂಧಿತ ಅಧಿಕಾರಿಯಿಂದ ಪ್ರಮಾಣಪತ್ರ ಪಡೆಯಬೇಕು.

3. ಜಾತಿ/ವರ್ಗ ಆಧಾರಿತ ಮೀಸಲಾತಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಕೆಳಗಿನಂತೆ ಮೀಸಲಾತಿ ಸೌಲಭ್ಯ ದೊರೆಯುತ್ತದೆ:

  • SC / ST ಅಭ್ಯರ್ಥಿಗಳು
  • ಪ್ರವರ್ಗ – I
  • ಪ್ರವರ್ಗ – II(A), II(B)
  • ಪ್ರವರ್ಗ – III(A), III(B)

ಈ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಮಾನ್ಯ ಪ್ರಮಾಣಪತ್ರವನ್ನು ಸಲ್ಲಿಸಿದರೆ ಮಾತ್ರ ಮೀಸಲಾತಿ ಅನ್ವಯವಾಗುತ್ತದೆ.

4. ಸೇವಾನಿರತ ಅಭ್ಯರ್ಥಿಗಳಿಗೆ (In-service Candidates)

ಈಗಾಗಲೇ ಸರ್ಕಾರಿ ಅಥವಾ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು NOC (No Objection Certificate) ಸಲ್ಲಿಸಬೇಕು.

  • ಸಂಬಂಧಿತ ಇಲಾಖೆ/ಸಂಸ್ಥೆಯಿಂದ NOC ಪಡೆಯಬೇಕು
  • ಇಲ್ಲದಿದ್ದರೆ ಅರ್ಜಿ ಪರಿಗಣಿಸಲಾಗುವುದಿಲ್ಲ

ಮುಖ್ಯ ಸೂಚನೆ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಎಲ್ಲಾ ಅಗತ್ಯ ಪ್ರಮಾಣಪತ್ರಗಳನ್ನು ಹೊಂದಿರುವುದು ಕಡ್ಡಾಯ. ಯಾವುದೇ ತಪ್ಪು ಮಾಹಿತಿ ನೀಡಿದರೆ ಅಥವಾ ಅಗತ್ಯ ದಾಖಲೆಗಳು ಇಲ್ಲದಿದ್ದರೆ, ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 40 ವರ್ಷ

ವಯೋಮಿತಿ ಸಡಿಲಿಕೆ:

  • SC/ST/Cat-I: 5 ವರ್ಷ

  • Cat-2A/2B/3A/3B: 3 ವರ್ಷ

ಅರ್ಜಿ ಶುಲ್ಕ:

Preliminary Exam

  • SC/ST/PwBD: ₹250

  • General/OBC: ₹500

Main Exam

  • SC/ST/PwBD: ₹750

  • General/OBC: ₹1500

👉 ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  • ಪ್ರಾಥಮಿಕ ಪರೀಕ್ಷೆ

  • ಮುಖ್ಯ ಲಿಖಿತ ಪರೀಕ್ಷೆ

  • ಸ್ಟೆನೋಗ್ರಫಿ ಪರೀಕ್ಷೆ

  • ಸಂದರ್ಶನ

Karnataka High ಆಯ್ಕೆ ವಿಧಾನ:

  1. ಶೀಘ್ರ ಲಿಪಿ ಪರೀಕ್ಷೆಗೆ ಅಭ್ಯರ್ಥಿಗಳ ಆಯ್ಕೆ: ಎಲ್ಲಾ ಅರ್ಹ ಮತ್ತು ಅಂಗೀಕರಿಸಿದ ಅರ್ಜಿಗಳ ಅಭ್ಯರ್ಥಿಗಳನ್ನು ಶೀಘ್ರ ಲಿಪಿ ಪರೀಕ್ಷೆಗೆ ಕರೆಯಲಾಗುವುದು.
  2. ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಶೀಘ್ರ ಲಿಪಿಕಾರರು ಹುದ್ದೆಯ ಆಯ್ಕೆಯನ್ನು ಶೀಘ್ರ ಲಿಪಿ ಮತ್ತು ಸಂದರ್ಶನ ಸಾಮರ್ಥ್ಯದ ಆಧಾರದ ಮೇಲೆ ಈ ಕೆಳಕಂಡಂತೆ ಮಾಡಲಾಗುತ್ತದೆ.
ಕ್ರಮ ಸಂಖ್ಯೆ ವಿವರಗಳು ಗರಿಷ್ಟ ಅಂಕಗಳು ಕನಿಷ್ಠ ಅಂಕಗಳು
1 ಶೀಘ್ರ ಲಿಪಿ ಪರೀಕ್ಷೆ 100 60
2 ಸಂದರ್ಶನ 20 10
ಒಟ್ಟು 120 ಅಂಕಗಳು 70 ಅಂಕಗಳು

3. ಶೀಘ್ರ ಲಿಪಿ ಪರೀಕ್ಷೆಯನ್ನು ನಡೆಸಲು ಸೂಚಿಸಲಾದ ವಿಧಾನ: 600 ಪದಗಳನ್ನು ಹೊಂದಿರುವ ಕಂಡಿಕೆಯನ್ನು ನಿಮಿಷಕ್ಕೆ 120 ಪದಗಳಂತೆ ಸುಮಾರು 5 ನಿಮಿಷಗಳ ಕಾಲ ಉತ್ಕಲೇಖನ (dictation) ನೀಡಲಾಗುತ್ತದೆ ಮತ್ತು ಅಭ್ಯರ್ಥಿಗಳು ನೀಡಿದ ಕಂಡಿಕೆಯನ್ನು ಕಂಪ್ಯೂಟರ್ನಲ್ಲಿ 45 ನಿಮಿಷಗಳಲ್ಲಿ ಅನುದಾನ ಮಾಡಬೇಕು.

4. ಸಂದರ್ಶನ: ಶೀಘ್ರ ಲಿಪಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳನ್ನು ಅರ್ಹತೆಯ ಕ್ರಮದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಪ್ರತಿಯೊಂದು ವಿಭಾಗದಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯ ಐದು ಪಟ್ಟು ವ್ಯಕ್ತಿಗಳನ್ನು ಸಂದರ್ಶನಕ್ಕೆ ಸೂಚಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  • ಮೊದಲು ಅಧಿಕೃತ ನೋಟಿಫಿಕೇಶನ್ ಚೆನ್ನಾಗಿ ಓದಿ

  • Email ID ಮತ್ತು Mobile Number ಸಿದ್ಧವಾಗಿರಲಿ

  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ

  • ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ

  • ಫೋಟೋ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ

  • ಶುಲ್ಕ ಪಾವತಿಸಿ

  • Submit ಮಾಡಿ Application Number save ಮಾಡಿ

Karnataka High Court Recruitment ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ: 16 ಮಾರ್ಚ್ 2026

  • ಅರ್ಜಿ ಕೊನೆ ದಿನಾಂಕ: 15 ಏಪ್ರಿಲ್ 2026

Karnataka High Court Recruitment ಸೂಚನೆಗಳು :

  1. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳಿಗೆ ಶುಲ್ಕವನ್ನು ಪಾವತಿಸಿದ್ದರು ಸಹ ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರುಪಾವತಿಸಲಾಗುವುದಿಲ್ಲ ಎಂಬ ಅಂಶವನ್ನು ಅಭ್ಯರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು.
  2. ಕೊನೆಯ ಕ್ಷಣದಲ್ಲಿ ಅರ್ಜಿ ಸಲ್ಲಿಸುವಾಗ ಆಗಬಹುದಾದ ಒತ್ತಡಗಳನ್ನು ತಪ್ಪಿಸಲು ಅಭ್ಯರ್ಥಿಗಳು ಮುಂಚಿತವಾಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
  3. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಲು ದಿನಾಂಕ 15 ಏಪ್ರಿಲ್ 2020 ರ ರಾತ್ರಿ 11:59 ರವರೆಗೆ ನಿಗದಿಪಡಿಸಲಾಗಿದೆ.
  4. ಅವಶ್ಯಕತೆಗಳನ್ನು ಪೂರೈಸದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
  5. ಶೀಘ್ರಲಿಪಿ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ಕರೆಯಲ್ಪಡುವ ಅಭ್ಯರ್ಥಿಗಳಿಗೆ ಸಂದರ್ಭ ಅನುಸಾರ ಅಂಚೆ/ ಇ-ಮೇಲ್ ಮೂಲಕ ತಿಳಿಸಲಾಗುವುದು.

ಮೀಸಲಾತಿ ಕೋರುವ ಅರ್ಹತೆಗಳು – ಸಂಪೂರ್ಣ ಮಾಹಿತಿ

Article 371-J ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ಸೌಲಭ್ಯಗಳನ್ನು ನೀಡಲಾಗಿದೆ. ಈ ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾತಿ ಅನ್ವಯಿಸುತ್ತದೆ.

ಈ ವ್ಯವಸ್ಥೆಯನ್ನು Karnataka Civil Services Rules 2013 ಅನ್ವಯ ಸರ್ಕಾರ ಜಾರಿಗೆ ತಂದಿದ್ದು, ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಉದ್ದೇಶ ಹೊಂದಿದೆ.

ಜಾತಿ ಮೀಸಲಾತಿ ಪಡೆಯಲು ಅಗತ್ಯವಾದ ಅರ್ಹತೆ:

ಮೀಸಲಾತಿಯನ್ನು ಪಡೆಯಲು ಅಭ್ಯರ್ಥಿಗಳು ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಯು ತನ್ನ ಜಾತಿ ಅಥವಾ ಪಂಗಡಕ್ಕೆ ಸಂಬಂಧಿಸಿದ ಮಾನ್ಯ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಪ್ರಮಾಣಪತ್ರವನ್ನು ಸಂಬಂಧಿತ ಅಧಿಕಾರಿಯಿಂದ ನೀಡಲ್ಪಟ್ಟಿರಬೇಕು ಮತ್ತು ಅದು ಪ್ರಚಲಿತ ನಿಯಮಗಳಿಗೆ ಅನುಗುಣವಾಗಿರಬೇಕು.

ಸರಿಯಾದ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ದೊರೆಯುತ್ತದೆ.

ಜಾತಿ ಪ್ರಮಾಣಪತ್ರಗಳ ನಮೂನೆ ವಿವರ:

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಪ್ರಮಾಣಪತ್ರದ ನಮೂನೆ ವಿಭಿನ್ನವಾಗಿರುತ್ತದೆ. ಕೆಳಗಿನಂತೆ ವಿವರಿಸಲಾಗಿದೆ:

ವರ್ಗ ನಮೂನೆ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ನಮೂನೆ – ಡಿ
ಪ್ರವರ್ಗ – I ಗೆ ಸೇರಿದ ಅಭ್ಯರ್ಥಿಗಳು ನಮೂನೆ – ಇ
ಪ್ರವರ್ಗ – II(A) / II(B) / III(A) / III(B) ಗೆ ಸೇರಿದ ಅಭ್ಯರ್ಥಿಗಳು ನಮೂನೆ – ಎಫ್

Karnataka High Court: ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಾತಿ ಸೌಲಭ್ಯವು ದೊಡ್ಡ ಅವಕಾಶವಾಗಿದ್ದು, ಸರಿಯಾದ ಪ್ರಮಾಣಪತ್ರಗಳು ಮತ್ತು ಅರ್ಹತೆಗಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ನಿಯಮಗಳನ್ನು ಸರಿಯಾಗಿ ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಬಹಳ ಮುಖ್ಯ.

Read More: PM-YASASVI Scholarship 2026: OBC, EBC, DNT ವಿದ್ಯಾರ್ಥಿಗಳಿಗೆ 100% ಸ್ಕಾಲರ್‌ಶಿಪ್ – ತರಗತಿ 9 ರಿಂದ 12ರವರೆಗೆ ಉಚಿತ ಶಿಕ್ಷಣ!

ಅಧಿಕೃತ ವೆಬ್‌ಸೈಟ್
APPLY HERE