Telegram Join My Telegram WhatsApp Join My WhatsApp

Vikas Bank 2026: Degree/SSLC ಇದ್ದ್ರೆ ಸಾಕು ಬ್ಯಾಂಕ್‌ನಲ್ಲಿ ಪರೀಕ್ಷೆ ಇಲ್ಲದೆ ಕೆಲಸ ಪಡೆದುಕೊಳ್ಳಬಹುದು – ಈಗಲೇ Apply ಮಾಡಿ

Vikas Bank: ಸಾಮಾಜಿಕ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ಪೂರೈಸುವುದರೊಂದಿಗೆ ಜನರ ಆರ್ಥಿಕ ಅಗತ್ಯಗಳನ್ನು ಪೂರೈಸುವ ಸಹಕಾರಿ ಕ್ಷೇತ್ರದ ಉನ್ನತ ಧ್ಯೇಯ ಮತ್ತು ಮೌಲ್ಯಗಳನ್ನು ಆಧರಿಸಿದ ನೈತಿಕ ವ್ಯವಹಾರ ಪದ್ಧತಿಗಳನ್ನು ವ್ಯವಹರಿಸುತ್ತ ಬರುತ್ತಿರುವ ವಿಕಾಸ ಸೌಹಾರ್ದ ಬ್ಯಾಂಕ್ನಲ್ಲಿ ಒಟ್ಟು 46 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿಕಾಸ ಸೌಹಾರ್ದ ಬ್ಯಾಂಕ್ ತಂತ್ರಜ್ಞಾನ ಕಾರ್ಯಕ್ರಮತೆ ಮತ್ತು ಉತ್ತಮ ಆಡಳಿತದಲ್ಲಿ ಶ್ರೇಷ್ಠತೆಯ ಮೂಲಕ ಬ್ಯಾಂಕಿನ ಮೌಲ್ಯವನ್ನು ಹೆಚ್ಚಿಸುವ ಬಲವಾದ ಬ್ರಾಂಡ್ ಹೊಂದಿರುವ ಪ್ರಗತಿಪರ ಬ್ಯಾಂಕ್ ಆಗುವುದು ಈ ಬ್ಯಾಂಕ್ ನ ಗುರಿಯಾಗಿದೆ.

ಹೊಸಪೇಟೆಯ ವಿಕಾಸ ಸೌಹಾರ್ದ ಬ್ಯಾಂಕ್ನಲ್ಲಿ ಒಟ್ಟು 46 ಬ್ರಾಂಚ್ ಮ್ಯಾನೇಜರ್, ಆಡಿಟರ್, ಲಾ ಆಫೀಸರ್, ಪ್ರಬೇಶನರಿ ಆಫೀಸರ್, ರಿಕವರಿ ಅಸಿಸ್ಟೆಂಟ್ / ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಕರೆ ನೀಡಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಏಪ್ರಿಲ್ 2026, ಡಿಗ್ರಿ ಮತ್ತೆ ಎಸ್ ಎಸ್ ಎಲ್ ಸಿ (SSLC) ಮಾಡಿದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ, ಇದರ ಸದುಪಯೋಗವನ್ನು ಪಡೆದುಕೊಂಡು ಈ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.

Vikas Bank: ಹುದ್ದೆಗಳ ವಿವರಗಳು:

  • ಬ್ರಾಂಚ್ ಮ್ಯಾನೇಜರ್ ಅಥವಾ ಸೀನಿಯರ್ ಆಫೀಸರ್ ಸ್ಥಾನಕ್ಕೆ ಒಟ್ಟು 10 ಹುದ್ದೆಗಳ ಕರೆ ನೀಡಿದ್ದಾರೆ.
  • ಆಡಿಟರ್ ಹುದ್ದೆಗೆ 4 ಪೋಸ್ಟ್ ಖಾಲಿ ಇದೆ.
  • ಲಾ ಆಫಿಸರ್ ಹುದ್ದೆಗೆ 2 ಪೋಸ್ಟ್ ಖಾಲಿ ಇದೆ.
  • ಪ್ರೊಬೆಷನರಿ ಆಫೀಸರ್ ಹುದ್ದೆಗೆ 20 ಪೋಸ್ಟ್ ಖಾಲಿ ಇದೆ.
  • ರಿಕವರಿ ಅಸಿಸ್ಟೆಂಟ್ ಅಥವ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ 10 ಪೋಸ್ಟ್ ಖಾಲಿ ಇದೆ.

ಅರ್ಹತೆ:

ಕ್ರಮ ಸಂಖ್ಯೆ ವೃತ್ತಿ ವಿದ್ಯಾರ್ಹತೆ ವಯಸ್ಸಿನ ಮಿತಿ  ಅನುಭವ
1 ಬ್ರಾಂಚ್ ಮ್ಯಾನೇಜರ್ ಅಥವ ಸೀನಿಯರ್ ಆಫೀಸರ್ ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ ಪದವಿ ಗರಿಷ್ಠ35 ವರ್ಷ 5 ವರ್ಷ
2 ಆಡಿಟರ್ CA, CMA ಗರಿಷ್ಠ 35 ವರ್ಷ 5 ವರ್ಷ
3 ಲಾ ಆಫಿಸರ್ ಕಾನೂನಿನಲ್ಲಿ ಪದವಿ, ಪ್ರಾಯೋಗಿಕ ಅನುಭವದೊಂದಿಗೆ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಗರಿಷ್ಠ35 ವರ್ಷ 5 ವರ್ಷ
4 ಪ್ರೊಬೆಷನರಿ ಆಫೀಸರ್ ಹಣಕಾಸು ಮತ್ತು ಬ್ಯಾಂಕಿಂಗ್‌ನಲ್ಲಿ ಪದವಿ ಗರಿಷ್ಠ30 ವರ್ಷ ಹೊಸಬರು ಅರ್ಜಿ ಸಲ್ಲಿಸಬಹುದು
5  ರಿಕವರಿ ಅಸಿಸ್ಟೆಂಟ್ ಅಥವ ಜೂನಿಯರ್ ಅಸಿಸ್ಟೆಂಟ್  SSLC  ಗರಿಷ್ಠ30 ವರ್ಷ ಹೊಸಬರು ಅರ್ಜಿ ಸಲ್ಲಿಸಬಹುದು

 

ಅರ್ಜಿ ಶುಲ್ಕ:

ಎಲ್ಲಾ ಅಭ್ಯರ್ಥಿಗಳು: ರೂ. 500/-
ಪಾವತಿ ವಿಧಾನ: ಆನ್‌ಲೈನ್

Vikas Bank ಅರ್ಹತೆ ಮತ್ತು ಪ್ರಾವೀಣ್ಯತೆ:

1. ಬ್ರಾಂಚ್ ಮ್ಯಾನೇಜರ್: ಬ್ಯಾಂಕಿಂಗ್ ಚಟುವಟಿಕೆಗಳು, ಅಕೌಂಟಿಂಗ್ ಜ್ಞಾನ, ಕನ್ನಡ ಇಂಗ್ಲೀಷ್ ಹಿಂದಿ ಮತ್ತು ಯಾವುದೇ ಇತರ ಭಾಷೆ ತಿಳಿದಿರಬೇಕು.

2. ಆಡಿಟರ್: ಟೆಕ್ನಿಕಲ್ ಕೌಶಲ್ಯಗಳು, MS-Excel, MS- word ನಲ್ಲಿ ಪರಿಣತಿ ಹೊಂದಿರಬೇಕು.

3. ಲಾ ಆಫೀಸರ್: ಕನ್ನಡ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪ್ರಾವೀಣ್ಯತೆ. ಸಂಬಂಧಿತ ಕೆಲಸದಲ್ಲಿ ತಂತ್ರಜ್ಞಾನದ ಬಳಕೆಗಳು ಮತ್ತು ದೂರು ಕರಡು ರಚನೆಯ ಬಗ್ಗೆ ಸಾಕಷ್ಟು ಜ್ಞಾನ, ಲಿಟಿಗೇಷನ್ ಪ್ರಕ್ರಿಯೆ‌ಗಳ ನಟನೆ ರೆಸಲ್ಯೂಶನ್ ಪರಿಶೀಲನೆ, ಆದ್ಯತೆಯ ಸಾಲದ ದಾಖಲೆಗಳು ಮತ್ತು ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಪ್ರಕರಣಗಳನ್ನು ಸಲ್ಲಿಸಲು ದಾಖಲೆಗಳ ತಯಾರಿಕೆ, ದಾಖಲೆಗಳ ತಯಾರಿಕೆ ಮಾಡಲು ಬರಬೇಕು.

4. ಪ್ರೊಬೆಷನರಿ ಆಫೀಸರ್: ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು ಮತ್ತು ಇತರ ಭಾಷೆ ತಿಳಿದಿದ್ದರೆ ಲಾಭದಾಯಕ.

5. ರಿಕವರಿ ಅಸಿಸ್ಟೆಂಟ್ ಜೂನಿಯರ್ ಅಸಿಸ್ಟೆಂಟ್: ಕನ್ನಡ ಮತ್ತು ಇತರ ಯಾವುದೇ ಸ್ಥಳೀಯ ಭಾಷೆಗಳಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮೂಲ ಇಂಗ್ಲಿಷ್ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಪಾತ್ರಗಳು ಮತ್ತು ಜವಾಬ್ದಾರಿಗಳು:

1. ಬ್ರಾಂಚ್ ಮ್ಯಾನೇಜರ್ ಸೀನಿಯರ್ ಆಫೀಸರ್:

  • ಶಾಖೆಯ ಬ್ಯಾಂಕಿಂಗ್ ಕಾರ್ಯಗಳನ್ನು ಒಬ್ಬರೇ ನಿರ್ವಹಿಸಬೇಕು.
  • ಗ್ರಾಹಕರ ಜೊತೆ ಒಳ್ಳೆಯ ಸಂಬಂಧ (CRM) ಹೊಂದಿರಬೇಕು.
  • ಸರ್ಕಾರದ ನಿಯಮಗಳು ಹಾಗೂ ಮಾರ್ಗ ಸೂಚಿಗಳನ್ನು ಅನುಸರಣೆ ಮಾಡಬೇಕು.
  • ವ್ಯವಹಾರ ವೃದ್ಧಿ ಮತ್ತು ಗುರಿ ಸಾಧನೆ ಮುಖ್ಯ, ಬ್ಯಾಂಕಿಗೆ ಹೆಚ್ಚು ವ್ಯವಹಾರವನ್ನು ತರಬೇಕು.
  • ಶಾಖೆಯ ಒಟ್ಟಾರೆ ನಿರ್ವಹಣೆ ಮಾಡಲು ಬರಬೇಕು.
  • ಸರಿಯಾದ ಸಮಯಕ್ಕೆ ಕೊಟ್ಟಂತಹ ಕೆಲಸವನ್ನು ಮುಗಿಸಬೇಕು.

2. ಆಡಿಟರ್:

  • ಬ್ಯಾಂಕಿನ ಆಡಿಟ್ ತಪ್ಪಿಲ್ಲದಂತೆ ನಡೆಸಿಕೊಂಡು ಹೋಗುವ ಅರ್ಹತೆ ಹೊಂದಿರಬೇಕು.
  • ಬ್ಯಾಂಕ್ ರಿಕಾನ್ಸಿಲೆಷನ್ ಚೆನ್ನಾಗಿ ತಿಳಿದಿರಬೇಕು.
  • ಹಣದ ಲೆಕ್ಕಾಚಾರಗಳನ್ನು ತಪ್ಪಿಲ್ಲದಂತೆ ಮಾಡಬೇಕು, ತಪ್ಪು ಕಂಡ ಬಂದರೆ ತಕ್ಷಣ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು.
  • TDS, GST ತೆರಿಗೆ ಕೆಲಸಗಳನ್ನು ನೋಡಿಕೊಳ್ಳಬೇಕು.
  • ಬ್ಯಾಂಕ್ ನ ಎಲ್ಲಾ ವಿಭಾಗಗಳಲ್ಲಿ ತೊಡಗಬೇಕು.

3. ಲಾ ಆಫಿಸರ್:

  • ಬ್ಯಾಂಕಿಗೆ ಸಂಬಂಧಿಸಿದ ಕಾನೂನು ವಿಷಯಗಳನ್ನು ನೋಡಿಕೊಳ್ಳಬೇಕು.
  • ಕೋರ್ಟ್ ಕೇಸ್ ಗಳನ್ನು ಹ್ಯಾಂಡಲ್ ಮಾಡಬೇಕು.
  • ಸಾಲ ವಾಪಸ್ ಪಡೆಯಲು ಕಾನೂನು ಕ್ರಮ ತೆಗೆದುಕೊಳ್ಳಬೇಕು.
  • ನೋಟೀಸ್ ಗಳಿಗೆ ಉತ್ತರ ಬರೆಯಬೇಕು.
  • ಒಪ್ಪಂದ ಮತ್ತು ದಾಖಲಾತಿಗಳನ್ನು ಚೆಕ್ ಮಾಡಬೇಕು.
  • ಬ್ಯಾಂಕಿಗೆ ಇನ್ನಿತರ ಕಾನೂನು ಸಹಾಯಗಳನ್ನು ಮಾಡಬೇಕು.

4. ಪ್ರೊಬೆಷನರಿ ಆಫೀಸರ್:

  • ಗ್ರಾಹಕರಿಗೆ ಸಹಾಯ ಮಾಡಬೇಕು.
  • ಬ್ಯಾಂಕ್ ಸೇವೆಗಳ ಬಗ್ಗೆ ತಿಳಿದುಕೊಳ್ಳಬೇಕು.
  • ಹಣದ ಲೆಕ್ಕ ಹಾಕುವುದು ಕಲಿಯಬೇಕು.
  • ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು.
  • ಬ್ಯಾಂಕ್ ಉತ್ಪನ್ನಗಳನ್ನು ಪ್ರಚಾರ ಮಾಡಬೇಕು.
  • ಶಾಖೆಯ ಕೆಲಸಗಳಲ್ಲಿ ಭಾಗವಹಿಸಬೇಕು.

5. ರಿಕವರಿ ಅಸಿಸ್ಟೆಂಟ್:

  • ಸಾಲ ತೆಗೆದುಕೊಂಡವರನ್ನು ಸಂಪರ್ಕಿಸಬೇಕು.
  • ಸಮಯಕ್ಕೆ ಹಣ ಪಾವತಿಸಲು ನೆನಪಿಸಬೇಕು.
  • ಮನೆ/ಆಫೀಸ್ ಗೆ ಭೇಟಿ ಕೊಡಬೇಕು.
  • ಅವರ ವ್ಯವಹಾರ ಮಾಹಿತಿ ತಿಳಿದುಕೊಳ್ಳಬೇಕು.
  • ಮೇಲಾಧಿಕಾರಿಗಳು ಹೇಳಿದ ಕೆಲಸ ಮಾಡಬೇಕು.

6. ಜೂನಿಯರ್ ಅಸಿಸ್ಟೆಂಟ್:

  • ಬ್ಯಾಂಕ್ ಕಚೇರಿಯನ್ನು ಸ್ವಚ್ಛವಾಗಿಡಬೇಕು.
  • ಫೈಲ್‌ಗಳು ಮತ್ತು ಪೇಪರ್‌ಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು.
  • ಸಿಬ್ಬಂದಿಗೆ ಸಹಾಯ ಮಾಡಬೇಕು.
  • ATM ಮತ್ತು ಕೌಂಟರ್ ನೋಡಿಕೊಳ್ಳಬೇಕು.
  • ಸಣ್ಣ ಸಣ್ಣ ಕೆಲಸಗಳನ್ನು ಮಾಡಬೇಕು.

Vikas Bankಗೆ ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ವಿಕಾಸ ಸೌಹಾರ್ದ ಬ್ಯಾಂಕ್ ನ ಅಧಿ ಸೂಚನೆಗಳನ್ನು ಸಂಪೂರ್ಣವಾಗಿ ಓದಿ ಅರ್ಥಮಾಡಿಕೊಳ್ಳಬೇಕು.
  • ಅಧಿಸೂಚನೆಗೆ ತಕ್ಕಂತೆ ತಮ್ಮ ಅರ್ಹತಮಾನದಂಟಗಳನ್ನು ಪೂರೈಸುತ್ತಾರೆ ಎಂದು ಕಚಿತಪಡಿಸಿಕೊಳ್ಳಬೇಕು.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಫೋನ್ ನಂಬರ್ ಮತ್ತು ಇಮೇಲ್ ಐಡಿಯನ್ನು ಹೊಂದಿರಬೇಕು.
  • ವಯಸ್ಸು, ಶಿಕ್ಷಣ ಅರ್ಹತೆ, ರೆಸ್ಯುಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
  • ವಿಕಾಸ್ ಬ್ಯಾಂಕ್ ಮ್ಯಾನೇಜರ್ ಅಥವಾ ಸೀನಿಯರ್ ಆಫೀಸರ್ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಅಗತ್ಯವಿರುವ ಪ್ರತಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಸಿಗ್ನೇಚರ್ ಮತ್ತು ಫೋಟೋವನ್ನು ಅಪ್ಲೋಡ್ ಮಾಡಿ. ಇತ್ತೀಚಿನ ಫೋಟೋ ಬಳಸುವುದು ಉತ್ತಮ ಮತ್ತು ಸಿಗ್ನೇಚರ್ ಬ್ಲರ್ ಇರದಂತೆ ನೋಡಿಕೊಳ್ಳಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕು.
  • ಸಬ್ಮಿಟ್ ಬಟನ್ ಒತ್ತುವ ಮುಂಚೆ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ.

ಪ್ರಮುಖ ದಿನಾಂಕಗಳು:

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 9-ಏಪ್ರಿಲ್-2026
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಏಪ್ರಿಲ್.
  • ಲಿಖಿತ ಪರೀಕ್ಷೆಯ ದಿನಾಂಕ (ಪ್ರೊಬೆಷನರಿ ಅಧಿಕಾರಿ ಹುದ್ದೆಗೆ ಮಾತ್ರ ಅನ್ವಯ): ಏಪ್ರಿಲ್ 26 ಭಾನುವಾರ ಹೊಸಪೇಟೆಯಲ್ಲಿ.
  • ಸಂದರ್ಶನ ದಿನಾಂಕ ( ಸೆಲೆಕ್ಟ್ ಆದ ಪ್ರೊಬೆಷನರಿ ಅಭ್ಯರ್ಥಿಗಳಿಗೆ ): ಏಪ್ರಿಲ್ 27 ಸೋಮವಾರ ಹೊಸಪೇಟೆಯಲ್ಲಿರುವ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ.

ವಿಕಾಸ ಸೌಹಾರ್ದ ಬ್ಯಾಂಕ್ ಅಧಿಸೂಚನೆ ಪ್ರಮುಖ ಲಿಂಕ್‌ಗಳು:

ಅಧಿಕೃತ ವೆಬ್ಸೈಟ್ ಲಿಂಕ್
ಪಿಡಿಎಫ್ ಲಿಂಕ್
ಅಪ್ಲೈ ಆನ್ಲೈನ್
ಅಧಿಕೃತ ಸೂಚನೆ

 

ಇನ್ನಷ್ಟು ಓದಿ: NCL 2026: Northern coalfields limited ನಲ್ಲಿ ಬೊಂಬಾಟ್ ವೇತನದ ಜೊತೆಗೆ 500+ ಹುದ್ದೆಗಳಿಗೆ ಅರ್ಜಿ ಆಹ್ವಾನ!

1 thought on “Vikas Bank 2026: Degree/SSLC ಇದ್ದ್ರೆ ಸಾಕು ಬ್ಯಾಂಕ್‌ನಲ್ಲಿ ಪರೀಕ್ಷೆ ಇಲ್ಲದೆ ಕೆಲಸ ಪಡೆದುಕೊಳ್ಳಬಹುದು – ಈಗಲೇ Apply ಮಾಡಿ”

Leave a Comment