Telegram Join My Telegram WhatsApp Join My WhatsApp

Karnataka: ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಭರ್ಜರಿ ಉದ್ಯೋಗ ಅವಕಾಶ!10ನೇ ತರಗತಿ ಮತ್ತು BE ಮಾಡಿದವರಿಗೆ ಸುವರ್ಣ ಅವಕಾಶ

Karnataka: ಭರ್ಜರಿ ವೇತನದ ಜೊತೆಗೆ ಹತ್ತರಿಂದ ಹದಿನೈದು ವರ್ಷ ಅನುಭವವುಳ್ಳ ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಯ ಸದುಪಯೋಗವನ್ನು ಬಳಸಿಕೊಳ್ಳಬಹುದು. ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ ಏಪ್ರಿಲ್ 2026ರ KRID ಸೂಚನೆಯ ಮೂಲಕ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು – ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. 9 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದು ಒಂದು ಒಳ್ಳೆಯ ಅವಕಾಶ.

ಸರ್ಕಾರಿ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು ಎನ್ನುವ ಚಿಂತೆ ಬಿಡಿ. ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಉದ್ಯೋಗ ಅವಕಾಶ ಬಂದಿದೆ, ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅಡಿಯಲ್ಲಿ(BSRP) ಹಲವು ಉನ್ನತ ಮಟ್ಟದ ಕೆಲಸಕ್ಕೆ ನೇಮಕಾತಿ ಪ್ರಕಟವಾಗಿದೆ. ಈ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಯುಕ್ತ ಯೋಜನೆಯಾಗಿದ್ದು ಸುಮಾರು 148 ಕಿಲೋಮೀಟರ್ ರೈಲು ಮಾರ್ಗ ನಿರ್ಮಾಣವಾಗಲಿದೆ ಈಗ ಈ ಮಹತ್ವದ ಯೋಜನೆಗೆ ಅರ್ಹ ಅಭ್ಯರ್ಥಿಗಳನ್ನು ಹುಡುಕಲಾಗುತ್ತಿದೆ.

Karnataka Suburban Rail Project: ಹುದ್ದೆಗಳ ವಿವರ

  1. ಅಸಿಸ್ಟೆಂಟ್ ಮ್ಯಾನೇಜರ್ ರೋಲಿಂಗ್ ಸ್ಟಾಕ್
  • ಹುದ್ದೆಗಳು 1
  • ವಯಸ್ಸು 45 ರಿಂದ 57 ವರ್ಷ
  • ಅರ್ಹತೆ ಬಿಇ ಬಿ ಟೆಕ್ ಡಿಪ್ಲೋಮೋ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್
  • ಅನುಭವ ರೈಲು ಮೆಟ್ರೋ ರೋಲಿಂಗ್ ಸ್ಟಾಕ್
  • ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಉತ್ತಮ ಅವಕಾಶ.

2. ಮ್ಯಾನೇಜರ್ ಡಿಪ್ಯೂಟಿ ಮ್ಯಾನೇಜರ್ ಅಸಿಸ್ಟೆಂಟ್ ಮ್ಯಾನೇಜರ್ ಸಿವಿಲ್

  • ಹುದ್ದೆಗಳು 3
  • ವಯಸ್ಸು 57 ವರ್ಷ
  • ಅರ್ಹತೆ ಸಿವಿಲ್ ಇಂಜಿನಿಯರಿಂಗ್ ಕೌಶಲ್ಯಗಳು ತಿಳಿದಿದ್ದರೆ ಉತ್ತಮ.
  • ಕೌಶಲ್ಯಗಳು ಆಟೋ ಕ್ಯಾಡ್ ಬಿ ಐ ಎಂ ತಿಳಿದಿದ್ದರು ಉತ್ತಮ
  • ಸಿವಿಲ್ ಇಂಜಿನಿಯರಿಂಗ್ ಗಳಿಗೆ ಇದು ಉತ್ತಮ ಅವಕಾಶ.

3. ಎಲೆಕ್ಟ್ರಿಕಲ್ ಜನರಲ್ ಮ್ಯಾನೇಜರ್

  • ಒಂದು ಹುದ್ದೆಗಳು
  • ಗರಿಷ್ಠ ವಯಸ್ಸು 55 ವರ್ಷ
  • ಅರ್ಹತೆ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಅನುಭವ ಕನಿಷ್ಠ 14 ವರ್ಷ
  • ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಹಿರಿಯ ಅನುಭವ ಹೊಂದಿರುವವರಿಗೆ ಇದು ಅತ್ಯುತ್ತಮ ಅವಕಾಶ.

4. ಸಿಗ್ನಲಿಂಗ್ ಅಂಡ್ ಟೆಲಿಕಮ್ಯುನಿಕೇಶನ್ ಜನರಲ್ ಮ್ಯಾನೇಜರ್

  • ಹುದ್ದೆಗಳು ಒಂದು
  • ವಯಸ್ಸು 55 ವರ್ಷ
  • ಅರ್ಹತೆ ಎಲೆಕ್ಟ್ರಿಕಲ್ ಅಥವಾ ಟೆಲಿಕಾಂ ಇಂಜಿನಿಯರಿಂಗ್
  • ಅನುಭವ 20 ವರ್ಷ, ಹತ್ತು ವರ್ಷ ರೈಲು ಅಥವಾ ಮೆಟ್ರೋ ಅನುಭವ ಅಗತ್ಯ
  • ರೈಲು ಸಿಗ್ನಲಿಂಗ್ ಮತ್ತು ಟೆಲಿಕಾಂ ಕ್ಷೇತ್ರದ ಅನುಭವ ಇದ್ದವರಿಗೆ ಇದು ಸೂಪರ್ ಅವಕಾಶ.

5. ಹೆಚ್ಚುವರಿ ಜನರಲ್ ಮ್ಯಾನೇಜರ್ / ಜಾಯಿಂಟ್ ಜನರಲ್ ಮ್ಯಾನೇಜರ್

  • ಅರ್ಹತೆ ಎಲೆಕ್ಟ್ರಿಕಲ್ ಮತ್ತು ಟೆಲಿಕಾಂ ಇಂಜಿನಿಯರಿಂಗ್
  • ಅನುಭವ 15 ರಿಂದ 16 ವರ್ಷ
  • ಮಧ್ಯಮ ಹಿರಿಯ ಮಟ್ಟದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

Karnataka Suburban Rail Project: ವಿಶೇಷ ಸೌಲಭ್ಯಗಳು

  1. ಈ ಸರ್ಕಾರಿ ಯೋಜನೆಯಲ್ಲಿ ಅಭ್ಯರ್ಥಿಗಳಿಗೆ ಉದ್ಯೋಗ ಭದ್ರತೆ ನೀಡಲಾಗುತ್ತಿದೆ.
  2. ಭರ್ಜರಿ ಸಂಬಳದ ಜೊತೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ
  3. ಊರು ಬಿಟ್ಟು ಬೇರೆ ಊರಿಗೆ ಹೋಗುವ ಅವಶ್ಯಕತೆ ಇಲ್ಲ ನಮ್ಮ ನಾಡಿನಲ್ಲಿ (ಬೆಂಗಳೂರಿನಲ್ಲಿ) ಕೆಲಸ ಮಾಡುವ ಸುವರ್ಣ ಅವಕಾಶ.
  4. ರೈಲು ಕ್ಷೇತ್ರದಲ್ಲಿ ಅನುಭವ ಇದ್ದರೆ ಭವಿಷ್ಯಕ್ಕೆ ತುಂಬಾ ಒಳ್ಳೆಯ ಸಹಾಯವಾಗುತ್ತದೆ.

ಪ್ರಮುಖ ಸೂಚನೆಗಳು:

  • ಪ್ರಮುಖವಾಗಿ ಕನ್ನಡ ತಿಳಿದಿದ್ದರೆ ಹೆಚ್ಚಿನ ಲಾಭ ಮತ್ತು ಆದ್ಯತೆ ನೀಡಲಾಗುತ್ತಿದೆ.
  • ರೈಲು ಮತ್ತು ಮೆಟ್ರೋದಲ್ಲಿ ಕೆಲಸ ಮಾಡಿರುವ ಅನುಭವ ಇರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ
  • ಡೆಪ್ಯುಟೇಷನ್ ಮತ್ತು ಒಪ್ಪಂದ ಎರಡು ವಿಧಾನಗಳಲ್ಲೂ ಕೂಡ ನೇಮಕಾತಿ ಮಾಡಲಾಗುತ್ತಿದೆ.

1. ಡೆಪ್ಯುಟೇಷನ್ ಅಭ್ಯರ್ಥಿಗಳಿಗಾಗಿ ಕೆಲವು ನಿಯಮಗಳು

  • ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಮೂರು ಬಾರಿ ಔಟ್ ಸ್ಟ್ಯಾಂಡಿಂಗ್ ಗ್ರೇಡ್ ಇರಬೇಕು.

2. ಕಾಂಟಾಕ್ಟ್ ಅಭ್ಯರ್ಥಿಗಳಿಗೆ ನಿಯಮಗಳು

  • ಇನ್ನೂ ಕಾಂಟಾಕ್ಟ್ ಅಭ್ಯರ್ಥಿಗಳಿಗೆ ಅತ್ಯುತ್ತಮ (Very Good) ಗಿನ್ನ ಕಡಿಮೆ ಗ್ರೇಡ್ ಇರಬಾರದು.

ಆಯ್ಕೆ ಪ್ರಕ್ರಿಯೆ :

  • ಮೊದಲಿಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
  • ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ
  • ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್ ಅಥವಾ ಎಸ್ಎಮ್ಎಸ್ (SMS) ಮೂಲಕ ಮಾಹಿತಿ ನೀಡಲಾಗುತ್ತದೆ.

Karnataka Suburban Rail Project: ಸಾಮಾನ್ಯ ಸೂಚನೆಗಳು

  • ಡಾಕುಮೆಂಟ್ ಪರಿಶೀಲನೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕರಿಸಲಾಗುತ್ತದೆ.
  • ಪ್ರತಿ ಮೂಲ ದಾಖಲೆಗಳ ಪರಿಶೀಲನೆ ಕಡ್ಡಾಯವಾಗಿರುತ್ತದೆ
  • ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕೆಲಸಕ್ಕೆ ಅರ್ಹರಾಗಿದ್ದರೆ ಹುದ್ದೆಗಳ ಸಂಖ್ಯೆ ಬದಲಾಗಬಹುದು.
  • ಅಭ್ಯರ್ಥಿಗಳ ಅರ್ಹತೆ, ಅನುಭವ ಮತ್ತು ಚಾಕು ಚಕ್ಯತೆ, ಕೆಲಸಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಸಂಸ್ಥೆ ನಿರ್ಧರಿಸುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಆಫ್ಲೈನ್ ಲಭ್ಯವಿಲ್ಲ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು, ರಿಜಿಸ್ಟ್ರೇಷನ್ ಮಾಡಿಕೊಳ್ಳುವಾಗ ಆಧಾರ್ ಕಾರ್ಡ್ ಬಳಸುವುದು ಉತ್ತಮ.
  • ಸರ್ಕಾರಿ ಪಿ ಎಸ್ ಯು (PSU) ಉದ್ಯೋಗಿಗಳು ಪ್ರಾಪರ್ ಚಾನೆಲ್ ಮೂಲಕ ಅಪ್ಲೈ ಮಾಡಬೇಕು.
  • ಕೊನೆಯ ದಿನಾಂಕ ಮೀರಿದ ನಂತರ ಅಭ್ಯರ್ಥಿಗಳು ಎಷ್ಟೇ ಅರ್ಹರಿದ್ದರು ಅರ್ಜಿ ಸ್ವೀಕರಿಸಲಾಗುವುದಿಲ್ಲ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

  • 6 ಮೇ 2026 ಅಭ್ಯರ್ಥಿಗಳು ಕೊನೆಯ ದಿನದವರೆಗೂ ಕಾಯದೆ ತಕ್ಷಣ ಕೆಲಸಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ.

ವೇತನ ಮತ್ತು ಭತ್ಯೆಗಳು:

1. ಡೆಪ್ಯೂಟೇಶನ್
  • ಡೆಪ್ಯುಟೇಷನ್ ಭತ್ಯೆ
  • ಲಂಪ್ ಸಂ ಟಿಏಡಿಕೆ
  • ಪ್ರಾಜೆಕ್ಟ್ ಭತ್ಯೆ
  • ಹೈ ಸ್ಕಿಲ್ ಭತ್ಯೆ
  • ಫಿಕ್ಸೆಡ್ ಮೆಡಿಕಲ್ ಭತ್ಯೆ
  • ವೈಯಕ್ತಿಕ ಅಪಘಾತ ವಿಮೆ ಮತ್ತು ಔಟ್ ಪೇಷಂಟ್ ಮೆಡಿಕಲ್ ರಿಇಂಬುರ್ಸಮೆಂಟ್
  • ಸಾರಿಗೆ ಭತ್ಯೆ
  • ಸಿಜಿಯು ಮೊಬೈಲ್ ಟೆಲಿಫೋನ್ ರೀಮ್ಬರ್ಸ್ಮೆಂಟ್
  • ವಾರ್ತಾ ಪತ್ರಿಕೆ ಭತ್ಯೆ
  • ಕಾಂಪೋಸಿಟ್ ಟ್ರಾನ್ಸ್ಫರ್ ಗ್ರಾಂಟ್
  • ಮಕ್ಕಳ ಶಿಕ್ಷಣ ಭತ್ಯೆ
2. ಕಾಂಟ್ರಾಕ್ಚುಯಲ್
ಹುದ್ದೆ ಸಂಬಳ ಇತರ ಭತ್ಯೆಗಳು 
ಹೆಚ್ಚುವರಿ ಜನರಲ್ ಮ್ಯಾನೇಜರ್(E7) ₹2,00,000/- 🏥 ವೈದ್ಯಕೀಯ, ವೈಯಕ್ತಿಕ ಅಪಘಾತ ವಿಮೆ, OPD ರೀimbursement
📱 CUG ಮೊಬೈಲ್ & ಟೆಲಿಫೋನ್ ರೀimbursement
📰 ವಾರ್ತಾಪತ್ರಿಕೆ ಭತ್ಯೆ
🚗 ಸಾರಿಗೆ ಭತ್ಯೆ
🚚 ಟ್ರಾನ್ಸಿಟ್ ಮತ್ತು ಸ್ಥಳಾಂತರ ಭತ್ಯೆ (Ex-Bangalore)
🎓 ಮಕ್ಕಳ ಶಿಕ್ಷಣ ಭತ್ಯೆ
ಜಾಯಿಂಟ್ ಜನರಲ್ ಮ್ಯಾನೇಜರ್ (E6) ₹1,75,000/- ಮೇಲಿನಂತೆ
ಮ್ಯಾನೇಜರ್ (E2) ₹80,000/- ಮೇಲಿನಂತೆ
ಡಿಪ್ಯೂಟಿ ಮ್ಯಾನೇಜರ್ (E1) ₹70,250/- ಮೇಲಿನಂತೆ
ಅಸಿಸ್ಟೆಂಟ್ ಮ್ಯಾನೇಜರ್ (EO) ₹53,250/- ಮೇಲಿನಂತೆ

 

ಕರ್ನಾಟಕದ ರಾಜಧಾನಿ ಬೆಂಗಳೂರು ಉಪನಗರದಲ್ಲಿ ದಿನದಲ್ಲಿ ಲಕ್ಷಾಂತರ ಜನರು ಟ್ರೈನಿನಲ್ಲಿ ಹಾಗೂ ಮೆಟ್ರೋದಲ್ಲಿ ಓಡಾಡುವುದು ಸಹಜವಾಗಿದೆ, ಕೆಲಸಕ್ಕೆ ಊರಿಗೆ ಅಥವಾ ಪ್ರವಾಸಕ್ಕೆ ಜನ ಹೆಚ್ಚಾಗಿ ರೈಲು ಅಥವಾ ಮೆಟ್ರೋ ವನ್ನು ಬಳಸುತ್ತಾರೆ. ಆದ್ದರಿಂದ ಇದು ಬೆಂಗಳೂರಿನಲ್ಲಿ ವಾಸಿಸುವಂತಹ ಪ್ರತಿಯೊಬ್ಬರಿಗೂ ಒಂದು ಉತ್ತಮ ಅವಕಾಶವನ್ನು ಸರ್ಕಾರವು ತಂದಿದೆ. ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಪ್ರಕಟವಾದ ಈ ಉದ್ಯೋಗಾವಕಾಶಗಳು ಸಾಮಾನ್ಯ ನೇಮಕಾತಿಯಲ್ಲ ಭವಿಷ್ಯದ ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ರೂಪಿಸುವ ಮಹತ್ವದ ಯೋಜನೆ ಯೊಂದರಲ್ಲಿ ಭಾಗಿಯಾಗುವರು ಅಪರೂಪದ ಅವಕಾಶವಾಗಿದೆ.

ಉತ್ತಮ ಅರ್ಹತೆ, ಅನುಭವ ಮತ್ತು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಂದು ದೊಡ್ಡ ಕರಿಯರ್ ಟರ್ನಿಂಗ್ ಪಾಯಿಂಟ್ ಆಗಬಹುದು. ಸರ್ಕಾರಿ ಯೋಜನೆಯಾದ್ದರಿಂದ ಉದ್ಯೋಗ ಭದ್ರತೆ, ಉತ್ತಮ ಸಂಬಳ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಬೆಳವಣಿಗೆ ಸಾಧ್ಯತೆಗಳೂ ಇವೆ. ವಿಶೇಷವಾಗಿ ರೈಲು, ಮೆಟ್ರೋ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು, ನಿಮ್ಮ ಅನುಭವವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ, ಏಕೆಂದರೆ ಈ ರೀತಿಯ ಉತ್ತಮ ಅವಕಾಶಗಳು ಯಾವಾಗಲೂ ಸಿಗುವುದಿಲ್ಲ, ಆದ್ದರಿಂದ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ ಇಂತಹ ಒಂದು ಒಳ್ಳೆಯ ಉದ್ಯೋಗವನ್ನು ತಮ್ಮ ತಾಗಿಸಿಕೊಳ್ಳಿ.

Direct Apply Link
PDF Link

 

Read More: Bellary: ಸರ್ಕಾರಿ ಕೆಲಸ ಬೇಕೇ? ಹೊಸಪೇಟೆ DCC ಬ್ಯಾಂಕ್ ನೇಮಕಾತಿ 2026 ಆರಂಭವಾಗಿದೆ! ಈಗಲೇ ಅರ್ಜಿ ಹಾಕಿ!

Leave a Comment