Bellary DCC ಬ್ಯಾಂಕ್ ನೇಮಕಾತಿ: ಬಳ್ಳಾರಿ ಜಿಲ್ಲೆ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹೊಸಪೇಟೆಯಲ್ಲಿ ನೇರ ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು ಅರ್ಜಿಗಳನ್ನು ಕೊರಿಯರ್ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಕಳುಹಿಸಲು ಅವಕಾಶವಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಿದೆ.
Bellary DCC ಬ್ಯಾಂಕ್ ನೇಮಕಾತಿ ಹುದ್ದೆಗಳ ವಿವರ:
- ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು 22 ಹುದ್ದೆಗಳು.
- ದ್ವಿತೀಯ ದರ್ಜೆ ಸಹಾಯಕರು 28 ಹುದ್ದೆಗಳು.
- ವಾಹನ ಚಾಲಕರು 1 ಹುದ್ದೆ
- ಕಿರಿಯ ಸೇವಕರು 31 ಹುದ್ದೆಗಳು.
ಸೂಚನೆ: ಈ ಹುದ್ದೆಗಳಿಗೆ ಮೀಸಲಾತಿ ಒಳಗೊಂಡಂತೆ ಸಾಮಾನ್ಯ ವರ್ಗದವರು ಮಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಮಾಜಿ ಸೈನಿಕರು ಕನ್ನಡ ಮಾಧ್ಯಮ ಯೋಜನ ನಿರಾಶ್ರಿತರು, ವಿಕಲಚೇತನರು ಹೀಗೆ ಒಳ ಮೀಸಲಾತಿ ವಿಂಗಡಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ :
1. ವ್ಯವಸ್ಥಾಪಕರು ಅಥವಾ ಪ್ರಥಮ ದರ್ಜೆ ಸಹಾಯಕರು ಹುದ್ದೆಗೆ ಭಾರತದ ಕಾನೂನಿನನ್ವಯ ಸ್ಥಾಪನೆಯಾದ ವಿಶ್ವವಿದ್ಯಾಲಯದ ಯಾವುದೇ ಪದವಿಯನ್ನು ಪಾಸಾಗಿರಬೇಕು, ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆಗೆ ಕನ್ನಡದ ಜ್ಞಾನ ಬರೆಯುವಿಕೆ ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಕನ್ನಡವನ್ನು ಅರ್ಥ ಮಾಡಿಕೊಳ್ಳಬೇಕು.
- ಕಂಪ್ಯೂಟರ್ ನಿರ್ವಹಣೆ ಬಗ್ಗೆ ಜ್ಞಾನ ಹೊಂದಿರಬೇಕು.
2. ದ್ವಿತೀಯ ದರ್ಜೆ ಸಹಾಯಕರು ಹುದ್ದೆಗೆ ಮಾನ್ಯತೆ ಪಡೆದ ಪದವಿ ಪೂರ್ವ ವಿಶ್ವಾವಿದ್ಯಾಲಯದಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು.
(PUC ಪಾಸ್ ಆಗಿರುವಿದು ಕಡ್ಡಾಯ)
3. ವಾಹನ ಚಾಲಕರು ಹುದ್ದೆಗೆ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಪ್ರಥಮ ಭಾಷೆಯಾಗಿ ಓದಿರಬೇಕು ಕಾನೂನು ಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
4. ಕಿರಿಯ ಸೇವಕರು ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾಗಿದ್ದು ಕನ್ನಡವನ್ನು ಪ್ರಥಮ ಭಾಷೆಯಾಗಿ ಓದಿರಬೇಕು.
ವಯೋಮಿತಿ :
ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಗೆ ತಿಳಿಸುವಂತೆ ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಕೆಳಕಂಡ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
1. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಥವಾ ಹಿಂದುಳಿದ ವರ್ಗಕ್ಕೆ ಸೇರಿರುವ ಅಭ್ಯರ್ಥಿಗಳು 40 ವರ್ಷ ವಯೋಮಿತಿ ಮೀರಿರಬಾರದು.
2. 2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗಕ್ಕೆ ಸೇರಿರುವ ಅಭ್ಯರ್ಥಿಗಳು 38 ವರ್ಷ ವಯೋಮಿತಿ ಮೀರಿರಬಾರದು.
3. ಇತರೆ ಅಭ್ಯರ್ಥಿಗಳಿಗೆ 35 ವರ್ಷ ವಯೋಮಿತಿ ಮೀರಿರಬಾರದು.
ಅರ್ಜಿ ಶುಲ್ಕ :
ಸಾಮಾನ್ಯ ಮತ್ತು 2A,2B,3A,3B ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ 1000 ರೂ + ಗೇಟ್ ವೇ ಶುಲ್ಕ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ 500 + ಗೇಟ್ ವೇ ಶುಲ್ಕ.
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
ಅರ್ಜಿ ಹಾಗೂ ಶುಲ್ಕ ಪಾವತಿಸಲು ಪ್ರಾರಂಭ ದಿನಾಂಕ 6 ಏಪ್ರಿಲ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಮೇ 2026
ಸೂಚನೆ: ಪಾವತಿಸಿದ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
Bellary DCC ಬ್ಯಾಂಕ್ ಆಯ್ಕೆ ವಿಧಾನ:
1. ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು :
ಈ ಹುದ್ದೆಗೆ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನಡೆಸುವ ಲಿಖಿತ ಪರೀಕ್ಷೆ ಈ ಕೆಳಗಿನ ವಿಷಯಗಳನ್ನು 200 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯಲ್ಲಿ ಹೊಂದಿರುತ್ತದೆ
| ಕ್ರಮ ಸಂಖ್ಯೆ | ವಿಷಯ | ಅಂಕಗಳು |
| 1 | ಕನ್ನಡ ಭಾಷೆ | 50 |
| 2 | ಸಾಮಾನ್ಯ ಇಂಗ್ಲಿಷ್ ಭಾಷೆ | 25 |
| 3 | ಸಾಮಾನ್ಯ ಜ್ಞಾನ | 25 |
| 4 | ಸಹಕಾರ ವಿಷಯ | 50 |
| 5 | ಭಾರತದ ಸಂವಿಧಾನ | 25 |
| 6 | ಬ್ಯಾಂಕಿಂಗ್, ಸಮಾಜಯುಕ್ತ ಚಟುವಟಿಕೆ ಮತ್ತು ವಸ್ತುನಿಷ್ಠ ವಿಷಯ | 25 |
| ಒಟ್ಟು | 200 ಅಂಕಗಳು |
2. ದ್ವಿತೀಯ ದರ್ಜೆ ಸಹಾಯಕರು : ಈ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ದ್ವಿತೀಯ ದರ್ಜೆಸಹಾಯಕರ ಹುದ್ದೆಗೆ ನಡೆಸುವ ಲಿಖಿತ ಪರೀಕ್ಷೆ ಈ ಕೆಳಗಿನ ವಿಷಯಗಳನ್ನು 200 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯಲ್ಲಿ ಹೊಂದಿರುತ್ತದೆ.
| ಕ್ರಮ ಸಂಖ್ಯೆ | ವಿಷಯ | ಅಂಕಗಳು |
| 1 | ಕನ್ನಡ ಭಾಷೆ | 50 |
| 2 | ಸಾಮಾನ್ಯ ಇಂಗ್ಲಿಷ್ ಭಾಷೆ | 25 |
| 3 | ಸಾಮಾನ್ಯ ಜ್ಞಾನ | 25 |
| 4 | ಸಹಕಾರ ವಿಷಯ | 50 |
| 5 | ಭಾರತದ ಸಂವಿಧಾನ | 25 |
| 6 | ಬ್ಯಾಂಕಿಂಗ್ ಸಮಾಜಯುಕ್ತ ಚಟುವಟಿಕೆ ಮತ್ತು ವಸ್ತುನಿಷ್ಠ ವಿಷಯ | 25 |
| ಒಟ್ಟು | 200 ಅಂಕಗಳು |
3. ವಾಹನ ಚಾಲಕರು: ವಾಹನ ಚಾಲಕರ ಖಾಲಿ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವಾಹನ ಚಾಲಕರ ಹುದ್ದೆಗೆ ನಡೆಸುವ ಲಿಖಿತ ಪರೀಕ್ಷೆಯು ಈ ಕೆಳಗಿನ ವಿಷಯಗಳನ್ನು ಒಳಗೊಂಡ 100 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಹೊಂದಿರುತ್ತದೆ
| ವಿಷಯ | ಅಂಕಗಳು |
|---|---|
| ಕನ್ನಡ ಭಾಷೆ | 50 |
| ಸಾಮಾನ್ಯ ಜ್ಞಾನ | 50 |
| ಒಟ್ಟು (Total) | 100 |
4. ಕಿರಿಯ ಸೇವಕರು: ಈ ಹುದ್ದೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕಿರಿಯ ಸೇವಕರ ಹುದ್ದೆಗೆ ನಡೆಸುವ ಲಿಖಿತ ಪರೀಕ್ಷೆಯು ಈ ಕೆಳಗಿನ ವಿಷಯಗಳನ್ನು ಒಳಗೊಂಡ 100 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಹೊಂದಿರುತ್ತದೆ
| ವಿಷಯ | ಅಂಕಗಳು |
|---|---|
| ಕನ್ನಡ ಭಾಷೆ | 50 |
| ಸಾಮಾನ್ಯ ಜ್ಞಾನ | 50 |
| ಒಟ್ಟು (Total) | 100 |
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಬರ್ತಿ ಮಾಡುವ ಮೊದಲು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು.
- ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್ ( https://www.bellarydcc.bank.in) ಗೆ ಭೇಟಿ ನೀಡಬೇಕು.
- ಕಡ್ಡಾಯವಾಗಿ ಅಧಿಸೂಚನೆ ಮತ್ತು ಸೂಚನೆಗಳನ್ನು ಅಭ್ಯರ್ಥಿಗಳು ಓದಬೇಕು. (PDF: BDCC ರೆಕ್ರೂಟ್ಮೆಂಟ್ 2026 )
- ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ನೊಂದಣಿ ಮಾಡಿಕೊಂಡು ಲಾಗಿನ್ ಮಾಡಿಕೊಳ್ಳಲು 10ನೇ ತರಗತಿಯ ಮಾಸ್ ಕಾರ್ಡ್ ನಲ್ಲಿ ಇರುವ ಹಾಗೆ ಹೆಸರು ಮತ್ತು ಜನ್ಮ ದಿನಾಂಕ ಕೊಡಬೇಕು.
- ನಿಮ್ಮ ನೊಂದಣಿ ಸಂಖ್ಯೆ ಹುಟ್ಟಿದ ದಿನಾಂಕ ನಮೂದಿಸುವ ಮೂಲಕ ಲಾಗಿನ್ ಆಗಿ ಅಭ್ಯರ್ಥಿಗಳು ವಿವರದ ಮಾಹಿತಿಯನ್ನು ಮತ್ತು ವಿದ್ಯಾರ್ಥಿ ಮಾಹಿತಿಯನ್ನು ನಮೂದಿಸಿ ನಂತರ ಸಬ್ಮಿಟ್ ಬಟನ್ ಅನ್ನು ಒತ್ತಬೇಕು.
ಸೂಚನೆ : Submit ಮಾಡಿದ ನಂತರ ಅರ್ಜಿಯಲ್ಲಿನ ಯಾವುದೇ ಮಾಹಿತಿ ಬದಲಾವಣೆಗೆ ಅವಕಾಶವಿರುವುದಿಲ್ಲ.
- ಅಭ್ಯರ್ಥಿಯು ಫೋಟೋ ಮತ್ತು ಸಹಿಯನ್ನು ತಪ್ಪದೇ ಅಪ್ಲೋಡ್ ಮಾಡಬೇಕು ಅಪ್ಲೋಡ್ ಮಾಡದಿದ್ದರೆ ಅರ್ಜಿಯನ್ನು ಪರಿಗಣಿಸುವುದಿಲ್ಲ.
ಅರ್ಜಿಯನ್ನು ಭರ್ತಿ ಮಾಡಿದ ನಂತರ ಅರ್ಜಿ ಶುಲ್ಕ ಹಾಗೂ ಅನ್ವಯಿಸುವ ಪೇಮೆಂಟ್ ಗೇಟ್ ವೇ ಲಿಂಕ್ ಬಳಸಿ ಪಾವತಿಸಬೇಕು.
ಅರ್ಜಿ ಶುಲ್ಕ ಪಾವತಿಸುವ ವಿಧಾನ:
- ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ, ಗೂಗಲ್ ಪೇ ಮುಖಾಂತರ ಸಲ್ಲಿಸಬೇಕು..
- ಅರ್ಜಿ ಶುಲ್ಕವನ್ನು ನಿಗದಿಪಡಿಸಿದ ಕೊನೆಯ ದಿನಾಂಕ 6 ಮೇ 2026 ರ ಒಳಗೆ ಪವತಿಸಬೇಕು.
Bellary DCC ಬ್ಯಾಂಕ್ ಹೆಲ್ಪ್ ಲೈನ್ ಸಂಖ್ಯೆ :
ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಯಾವುದಾದರೂ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದರೆ ಕಚೇರಿ ಕೆಲಸದ ದಿನಗಳಂದು ಬೆಳಿಗ್ಗೆ 10:30 ಇಂದ ಸಂಜೆ 5:00ರ ವರೆಗೆ ಕೆಳಕಂಡ ಸಹಾಯವಾಣಿ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದು.
ಹೆಲ್ಪ್ಲೈನ್ ನಂಬರ್ 988042-1742
ಇಮೇಲ್ id : bdcc@gmail.com
ಹೆಲ್ಪ್ಲೈನ್ ನಂಬರ್ : 9187235482
ಕಡ್ಡಾಯವಾಗಿ ಹಾಜರುಪಡಿಸಬೇಕಾದ ಪ್ರಮಾಣ ಪತ್ರಗಳು:
1. ವಿವಿಧ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಥಿಯ ಪ್ರಮಾಣ ಪತ್ರಗಳು ಮತ್ತು ಅಂಕ ಪಟ್ಟಿಗಳು.
2. SSLC ಮಾರ್ಕ್ಸ್ ಕಾರ್ಡ್ ವರ್ಗಾವಣೆಯ ಪತ್ರ, ಟಿಸಿ.
3. ವಿವಿಧ ಮೀಸಲಾತಿಗಳನ್ನು ಕೋರಿದಲ್ಲಿ ಮೀಸಲಾತಿ ಪ್ರಮಾಣ ಪತ್ರಗಳು ( ಜಾತಿ ಪ್ರಮಾಣ ಪತ್ರ).
ಪ್ರಮುಖ ಸೂಚನೆಗಳು :
- ಅಭ್ಯರ್ಥಿಗಳು ಆನ್ಲೈನ್ ಅರ್ಜಿಗಳನ್ನು ನಿಗದಿತ ಮಾಹಿತಿಗಳ ಆಧಾರದಿಂದ ತಮ್ಮ ಆಧಾರ್ ಕಾರ್ಡ್ನೊಂದಿಗೆ ಹೆಸರು ಇ-ಮೇಲ್ ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಅವುಗಳನ್ನು ದೃಢಪಡಿಸಿ ಅರ್ಜಿ ಸಲ್ಲಿಸಬೇಕು.
- ಅರ್ಜಿಯನ್ನು ಸಲ್ಲಿಸುವ ಮೊದಲು ನೀಡಿರುವ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಬೇಕು.
- ಅರ್ಜಿ ಶುಲ್ಕವನ್ನು ನಿಗದಿತ ವಿಧಾನದಲ್ಲಿ ಮಾತ್ರ ಪಾವತಿಸಬೇಕು ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಂಟಾಗುವ ತಾಂತ್ರಿಕ ದೋಷಗಳಿಗೆ ಅಭ್ಯರ್ಥಿಗಳೇ ಹೊಣೆಗಾರರು.
- ಅರ್ಜಿದಾರರು ಭರ್ತಿ ಮಾಡಿದ ಎಲ್ಲ ಮಾಹಿತಿಗಳು ನಿಜವಾದವುಗಳಾಗಿರಬೇಕು.
- ಅಭ್ಯರ್ಥಿಗಳು ತಮ್ಮ ಅರ್ಜಿಯ ಪ್ರಿಂಟ್ ಪ್ರತಿಯನ್ನು ಭವಿಷ್ಯದಲ್ಲಿ ಉಪಯೋಗಕ್ಕಾಗಿ ಉಳಿಸಿಕೊಳ್ಳಬೇಕು.
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಯು ನೀಡಿದ ಮಾಹಿತಿಯಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ನಂತರದ ಹಂತಗಳಲ್ಲಿ ಅವನ ಅಥವಾ ಅವಳ ಅಭ್ಯರ್ಥಿತ್ವವನ್ನು ರದ್ದುಪಡಿಸಲಾಗುತ್ತದೆ.
- ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಯ ಆಯ್ಕೆ ಕುರಿತು ಬ್ಯಾಂಕಿನ ಅಂತ್ಯಮ ನಿರ್ಧಾರವೇ ಅನ್ವಯವಾಗುತ್ತದೆ
ಪಿಡಿಎಫ್ ಲಿಂಕ್ |
ಬಳ್ಳಾರಿ ಡಿಸಿಸಿ ಬ್ಯಾಂಕ್ ನೋಟಿಫಿಕೇಶನ್ ಲಿಂಕ್ |
| ಇನ್ನಷ್ಟು ಓದಿ : Sambal 2026: ನಾರಿ ಅದಾಲತ್, ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಕುಂದುಕೊರತೆ ಪರಿಹಾರ ಯೋಜನೆ! |
All over India Bank Recruitment: 1000 ಹುದ್ದೆಗಳಿಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನಲ್ಲಿ 2026ರ ಭರ್ಜರಿ ನೇಮಕಾತಿ ಆರಂಭ! |
2 thoughts on “Bellary: ಸರ್ಕಾರಿ ಕೆಲಸ ಬೇಕೇ? ಹೊಸಪೇಟೆ DCC ಬ್ಯಾಂಕ್ ನೇಮಕಾತಿ 2026 ಆರಂಭವಾಗಿದೆ! ಈಗಲೇ ಅರ್ಜಿ ಹಾಕಿ!”