Telegram Join My Telegram WhatsApp Join My WhatsApp

Business Startup growth 2026: ಸಣ್ಣ ಉದ್ಯಮಿಗಳಿಗೆ ದೊಡ್ಡ ಅವಕಾಶ! NSIC ಕಾಂಸಾರ್ಟಿಯ ಯೋಜನೆ ಮೂಲಕ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಿ

Business Startup growth: ಇಂದು ಭಾರತದಲ್ಲಿ ಸಾವಿರಾರು ಸಣ್ಣ ಮತ್ತು ಸೂಕ್ಷ್ಮ ಉದ್ಯಮಿಗಳು (Micro & Small Enterprises) ತಮ್ಮ ವ್ಯವಹಾರವನ್ನು ಬೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಂದು ದೊಡ್ಡ ಸಮಸ್ಯೆ ಏನೆಂದರೆ ಮಾರುಕಟ್ಟೆಗೆ ಪ್ರವೇಶ ಪಡೆಯುವುದು. ಉತ್ತಮ ಉತ್ಪನ್ನ ಇದ್ದರೂ ಅದನ್ನು ಮಾರಾಟ ಮಾಡಲು ಸರಿಯಾದ ವೇದಿಕೆ ಸಿಗದಿದ್ದರೆ ವ್ಯವಹಾರ ಬೆಳೆಯುವುದೇ ಕಷ್ಟ. ಇದನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ National Small Industries Corporation ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರು Consortia and Tender Marketing Scheme. 

ಈ ಯೋಜನೆಯ ಮುಖ್ಯ ಉದ್ದೇಶ ಸಣ್ಣ ಉದ್ಯಮಿಗಳಿಗೆ ಸರ್ಕಾರಿ ಮತ್ತು ಖಾಸಗಿ ಟೆಂಡರ್‌ಗಳಲ್ಲಿ ಭಾಗವಹಿಸಲು ಸಹಾಯ ಮಾಡುವುದು. ಸಾಮಾನ್ಯವಾಗಿ ಸಣ್ಣ ಉದ್ಯಮಿಗಳು ದೊಡ್ಡ ಟೆಂಡರ್‌ಗಳಿಗೆ ಅರ್ಜಿ ಹಾಕಲು ಹೆದರುತ್ತಾರೆ. ಯಾಕಂದ್ರೆ ಹೆಚ್ಚಿನ ಸ್ಪರ್ಧೆ, ಹಣಕಾಸಿನ ಕೊರತೆ ಮತ್ತು ತಾಂತ್ರಿಕ ಪ್ರಕ್ರಿಯೆಗಳ ಜಟಿಲತೆ ಎಂಬ ಕಾರಣಗಳಿಂದ ಅನೇಕ ಉದ್ಯಮಿಗಳು ದೊಡ್ಡ ಟೆಂಡರ್‌ಗಳಿಗೆ ಅರ್ಜಿ ಹಾಕಲು ಹೆದರುತ್ತಾರೆ. ಆದರೆ ಈ ಯೋಜನೆ ಆ ಎಲ್ಲಾ ಅಡೆತಡೆಗಳಿಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಇದು ಸಣ್ಣ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ, ಆರ್ಥಿಕ ಸಹಾಯ ಮತ್ತು ತಾಂತ್ರಿಕ ಬೆಂಬಲವನ್ನು ನೀಡಿ, ಅವರಿಗೆ ಆತ್ಮವಿಶ್ವಾಸದಿಂದ ಟೆಂಡರ್‌ಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸುತ್ತದೆ.

Business: ಯಾಕೆ ಈ ಯೋಜನೆ ಗೇಮ್ ಚೇಂಜರ್?

  • ಈ ಯೋಜನೆಯ ಮೂಲಕ ನೀವು ಒಬ್ಬರೇ ಟೆಂಡರ್‌ಗೆ ಹೋಗಬೇಕಾಗಿಲ್ಲ
  • ನೀವು ಗುಂಪಾಗಿ (Consortia) ಸೇರಿ ದೊಡ್ಡ ಮಟ್ಟದಲ್ಲಿ ಸ್ಪರ್ಧಿಸಬಹುದು
  • ದೊಡ್ಡ ಪ್ರಮಾಣದ ಆರ್ಡರ್‌ಗಳನ್ನು ಸುಲಭವಾಗಿ ಪಡೆಯಬಹುದು
  • NSIC ಸಂಪೂರ್ಣ ಪ್ರಕ್ರಿಯೆಯಲ್ಲಿ ನಿಮ್ಮ ಬೆಂಬಲವಾಗಿ ಕಾರ್ಯನಿರ್ವಹಿಸುತ್ತದೆ
  • ಈ ಯೋಜನೆ ಸಣ್ಣ ಉದ್ಯಮಿಗಳನ್ನು ದೊಡ್ಡ ಕಂಪನಿಗಳ ಮಟ್ಟಕ್ಕೆ ತರುವ ಶಕ್ತಿ ಹೊಂದಿದೆ

ಕನ್ಸಾರ್ಟಿಯಾ ಮತ್ತು ಟೆಂಡರ್ ಮಾರ್ಕೆಟಿಂಗ್ ಸಂಪೂರ್ಣ ಮಾಹಿತಿ: 

ಕನ್ಸಾರ್ಟಿಯಾ (Consortia) ಅಂದರೆ ಒಂದೇ ರೀತಿಯ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಉದ್ಯಮಿಗಳು ಸೇರಿ ಒಂದು ಗುಂಪು ರಚಿಸುವುದು

ಉದಾಹರಣೆಗೆ: ನೀವು ಕೇಬಲ್ ತಯಾರಿಸುತ್ತಿದ್ದರೆ ಮತ್ತು ಇನ್ನೂ 4 ಕಂಪನಿಗಳು ಅದೇ ಕೆಲಸ ಮಾಡುತ್ತಿದ್ದರೆ, ನೀವು ಎಲ್ಲರೂ ಸೇರಿ ಒಂದು Consortia ರಚಿಸಬಹುದು ಇದರಿಂದ ಒಟ್ಟಾಗಿ ದೊಡ್ಡ ಟೆಂಡರ್‌ಗಳನ್ನು ಪಡೆಯಲು ಸಾಧ್ಯವಾಗುತ್ತದೆ ಕೆಲಸವನ್ನು ಸದಸ್ಯರ ನಡುವೆ ಹಂಚಿಕೊಳ್ಳಬಹುದು ವ್ಯವಹಾರದಲ್ಲಿ ರಿಸ್ಕ್ ಕಡಿಮೆಯಾಗುತ್ತದೆ ಮತ್ತು ಸ್ಥಿರತೆ ಹೆಚ್ಚುತ್ತದೆ.

  • ಈ ಯೋಜನೆಯಡಿ NSIC ಟೆಂಡರ್‌ಗಳನ್ನು ಗುರುತಿಸುತ್ತದೆ ಮತ್ತು ಸೂಕ್ತ ಅವಕಾಶಗಳನ್ನು ಒದಗಿಸುತ್ತದೆ
  • ಟೆಂಡರ್‌ನಲ್ಲಿ ಭಾಗವಹಿಸಲು ಅಗತ್ಯವಾದ ಮಾರ್ಗದರ್ಶನ ನೀಡುತ್ತದೆ
  • ಎಲ್ಲಾ ಅಗತ್ಯ ದಾಖಲೆಗಳ ತಯಾರಿಕೆಯಲ್ಲಿ ಸಹಾಯ ಮಾಡುತ್ತದೆ
  • ಇದರಿಂದ ನೀವು professional support ಪಡೆದು ಸುಲಭವಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಟೆಂಡರ್ ಮಾರ್ಕೆಟಿಂಗ್ ಹೇಗೆ ನಡೆಯುತ್ತದೆ?

ಈ ಯೋಜನೆಯಡಿ NSIC:

  • ಟೆಂಡರ್‌ಗಳನ್ನು ಗುರುತಿಸುತ್ತದೆ
  • ನಿಮಗೆ ಭಾಗವಹಿಸಲು ಸಹಾಯ ಮಾಡುತ್ತದೆ
  • ಅಗತ್ಯ ದಾಖಲೆಗಳಲ್ಲಿ ಮಾರ್ಗದರ್ಶನ ನೀಡುತ್ತದೆ ಇದರಿಂದ ನೀವು ವೃತ್ತಿಪರ ಬೆಂಬಲ ಪಡೆಯುತ್ತೀರಿ.

ಯೋಜನೆಯ ಪ್ರಮುಖ ಅಂಶಗಳು – ಸಣ್ಣ ಉದ್ಯಮಿಗಳಿಗೆ ದೊಡ್ಡ ಅವಕಾಶ

ಈ ಯೋಜನೆ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ (MSEs) ಟೆಂಡರ್ ಪ್ರಕ್ರಿಯೆಯಲ್ಲಿ ಸುಲಭವಾಗಿ ಭಾಗವಹಿಸಲು ನೆರವಾಗುವ ಹಲವು ಪ್ರಮುಖ ಸೌಲಭ್ಯಗಳನ್ನು ಒದಗಿಸುತ್ತದೆ. ಮೊದಲನೆಯದಾಗಿ, NSIC SPRS ನಲ್ಲಿ ನೋಂದಾಯಿತ ಅಥವಾ ನೋಂದಣಿ ಪ್ರಕ್ರಿಯೆಯಲ್ಲಿ ಇರುವ ಉದ್ಯಮಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಆದರೆ, ಕೇವಲ ಟ್ರೇಡಿಂಗ್ (ಖರೀದಿ-ಮಾರಾಟ) ಮಾಡುವ ವ್ಯವಹಾರಗಳಿಗೆ ಅವಕಾಶ ಇಲ್ಲ; ಉತ್ಪನ್ನದಲ್ಲಿ value addition ಮಾಡುವುದು ಕಡ್ಡಾಯವಾಗಿದೆ.

ಇದಲ್ಲದೆ, ಟೆಂಡರ್ ಅರ್ಜಿಗೆ ಅಗತ್ಯವಿರುವ Earnest Money Deposit (EMD) ಮತ್ತು Security Deposit ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು NSIC ಸಹಾಯ ಮಾಡುತ್ತದೆ. ಇದು ಸಣ್ಣ ಉದ್ಯಮಿಗಳ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. Consortia ವ್ಯವಸ್ಥೆಯ ಮೂಲಕ ದೊಡ್ಡ ಪ್ರಮಾಣದ ಆರ್ಡರ್‌ಗಳನ್ನು ಪಡೆಯುವ ಅವಕಾಶವೂ ಇದೆ, ಮತ್ತು ಆ ಆರ್ಡರ್‌ಗಳನ್ನು ಸದಸ್ಯರ ನಡುವೆ ಹಂಚಿಕೊಳ್ಳಲಾಗುತ್ತದೆ, ಇದರಿಂದ ಎಲ್ಲರಿಗೂ ಲಾಭವಾಗುತ್ತದೆ.

ಮತ್ತೊಂದು ಮುಖ್ಯ ಸೌಲಭ್ಯವೆಂದರೆ ಕಚ್ಚಾ ವಸ್ತುಗಳ (Raw Material) ಲಭ್ಯತೆ. NSIC ಉದ್ಯಮಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಪಡೆಯಲು ಸಹಾಯ ಮಾಡುವುದರ ಜೊತೆಗೆ, ಅಗತ್ಯವಿದ್ದರೆ ಹಣಕಾಸು ಸಹಾಯವನ್ನೂ ಒದಗಿಸುತ್ತದೆ. ಈ ಎಲ್ಲಾ ಸೌಲಭ್ಯಗಳು ಸೇರಿ, ಸಣ್ಣ ಉದ್ಯಮಿಗಳನ್ನು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬಲಿಷ್ಠರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

Business: ಯೋಜನೆಯ ವಿಶೇಷ ವೈಶಿಷ್ಟ್ಯಗಳು:

  • ಈ ಯೋಜನೆ National Small Industries Corporation (NSIC) ಯ Single Point Registration Scheme (SPRS) ಅಡಿಯಲ್ಲಿ ನೋಂದಾಯಿತ ಮೈಕ್ರೊ ಮತ್ತು ಸಣ್ಣ ಉದ್ಯಮಗಳು (MSEs) ಗಳನ್ನು ಒಳಗೊಂಡಿದೆ.
  • SPRS ಅಡಿಯಲ್ಲಿ ನೋಂದಣಿ ಪಡೆಯಲು ಅರ್ಜಿ ಸಲ್ಲಿಸಿರುವ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿರುವ MSEs ಗಳು ಕೂಡ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ. ಟೆಂಡರ್ ಸಲ್ಲಿಸುವ ಮೊದಲು ಕಾರ್ಖಾನೆ ಪರಿಶೀಲನೆ ಕಡ್ಡಾಯವಾಗಿದೆ.
  • ಯಾವುದೇ ಉತ್ಪನ್ನಕ್ಕೆ ಹೆಚ್ಚುವರಿ ಮೌಲ್ಯ ಸೇರ್ಪಡೆ /ಪ್ಯಾಕಿಂಗ್ / ಬ್ರಾಂಡಿಂಗ್ ಇಲ್ಲದೆ ಕೇವಲ trading ಚಟುವಟಿಕೆಗಳಲ್ಲಿ ತೊಡಗಿರುವ ಘಟಕಗಳನ್ನು ಈ ಯೋಜನೆ ಒಳಗೊಂಡಿರುವುದಿಲ್ಲ.
  • ಈ ಯೋಜನೆ, ಎಲ್ಲರೂ ಭಾಗವಹಿಸಬಹುದಾದ ಟೆಂಡರ್‌ಗಳು ಮತ್ತು ಆಯ್ಕೆ ಮಾಡಿದ ಕೆಲವರಿಗೆ ಮಾತ್ರ ನೀಡುವ ಟೆಂಡರ್‌ಗಳಲ್ಲಿ ಭಾಗವಹಿಸಲು ಯಾವ ಘಟಕಗಳನ್ನು ಆಯ್ಕೆ ಮಾಡಬೇಕು ಎಂಬ ಸರಳ ವಿಧಾನವನ್ನು ಒಳಗೊಂಡಿದೆ.
  • ಟೆಂಡರ್‌ಗೆ ಅರ್ಜಿ ಹಾಕಲು ಬೇಕಾಗುವ EMD ಮತ್ತು ಸೆಕ್ಯುರಿಟಿ ಡಿಪಾಸಿಟ್ ಹಣವನ್ನು, ಈ ಯೋಜನೆ ನಿಮಗೆ ಸಹಾಯವಾಗಿ ಒದಗಿಸುತ್ತದೆ.
  • ಈ ಯೋಜನೆ consortia ರಚನೆಗೆ ಸಂಬಂಧಿಸಿದ ಸಂಪೂರ್ಣ ವಿಧಾನವನ್ನು ಒಳಗೊಂಡಿದೆ. ಒಂದೇ ರೀತಿಯ ಉತ್ಪನ್ನಗಳನ್ನು ತಯಾರಿಸುವ ಘಟಕಗಳನ್ನು ಸೇರಿಸಿ consortia ರಚಿಸಿ, MSEs ಗಳ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತದೆ.
  • consortia ಮೂಲಕ ದೊಡ್ಡ ಆರ್ಡರ್‌ಗಳನ್ನು ಪಡೆಯಲು ಟೆಂಡರ್‌ಗಳಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತದೆ ಮತ್ತು ಘಟಕಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್ಡರ್‌ಗಳನ್ನು ಹಂಚಲಾಗುತ್ತದೆ.
  • consortia ಸದಸ್ಯರಿಗೆ ಕಚ್ಚಾ ವಸ್ತುಗಳ ಲಭ್ಯತೆ ಮತ್ತು ಸರಬರಾಜುಗಳಿಗೆ ಅಗತ್ಯವಾದ credit ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
  • ಯೋಜನೆಯನ್ನು ಸುಗಮಗೊಳಿಸಲು, individual agreements, consortium agreements, board resolution, power of attorney ಸೇರಿದಂತೆ ಕಾನೂನು ದಾಖಲೆಗಳನ್ನು ಸರಳಗೊಳಿಸಿ ಪರಿಷ್ಕರಿಸಲಾಗಿದೆ.
  • ಸಣ್ಣ ಉದ್ಯಮಗಳ ಅಭಿವೃದ್ಧಿಗಾಗಿ, Ministry of Micro, Small and Medium Enterprises ವತಿಯಿಂದ 23 ಮಾರ್ಚ್ 2012 ರಂದು Public Procurement Policy for Micro and Small Enterprises Order 2012 ಜಾರಿಗೊಳಿಸಲಾಗಿದೆ.
  • ಈ ನೀತಿಯ ಪ್ರಕಾರ, ದೊಡ್ಡ ಕಂಪನಿಗಳು ಮತ್ತು consortia ಮೂಲಕ Micro & Small Enterprises ಗಳಿಗೆ subcontracting ಅವಕಾಶಗಳನ್ನು ಹೆಚ್ಚಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ.
  • NSIC ತನ್ನ ಕನ್ಸೋರ್ಟಿಯಂ ಮತ್ತು ಟೆಂಡರ್ ಮಾರುಕಟ್ಟೆ ಯೋಜನೆಯ ಅಡಿಯಲ್ಲಿ consortia ಗಳನ್ನು ರಚಿಸಿ, ಸರ್ಕಾರಿ ಇಲಾಖೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ (PSUs) ಅಗತ್ಯ ವಸ್ತುಗಳು ಮತ್ತು ಸೇವೆಗಳನ್ನು ಪೂರೈಸುತ್ತಿದೆ.
  • NSIC ಕಚೇರಿಗಳು consortia ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ಹೊಸ consortia ಗಳನ್ನು ರಚಿಸುತ್ತವೆ.

Business: ಟೆಂಡರ್ ಭಾಗವಹಿಸುವ ಮಿತಿಯ ನಿಗದಿ

NSIC ಮೂಲಕ ಟೆಂಡರ್‌ಗಳಲ್ಲಿ ಭಾಗವಹಿಸಲು ಬಯಸುವ ನೋಂದಾಯಿತ ಯೂನಿಟ್‌ಗಳಿಗೆ, ಸಂಬಂಧಿತ ಶಾಖಾ ಕಚೇರಿ (Branch Office) ಒಂದು ಒಟ್ಟು ಮಿತಿಯನ್ನು ನಿಗದಿಪಡಿಸುತ್ತದೆ. ಈ ಮಿತಿಯ ಒಳಗೆ ಮಾತ್ರ ಯೂನಿಟ್ ಯಾವುದೇ ಸಮಯದಲ್ಲಿ ಟೆಂಡರ್‌ಗಳಲ್ಲಿ ಭಾಗವಹಿಸಬಹುದು.

ಟೆಂಡರ್ ಮಿತಿ ಹೇಗೆ ನಿಗದಿಯಾಗುತ್ತದೆ?

ಕೆಳಗಿನ ಅಂಶಗಳಲ್ಲಿ ಯಾವುದು ಹೆಚ್ಚು ಇದೆಯೋ ಅದನ್ನೇ ಮಿತಿಯಾಗಿ ಪರಿಗಣಿಸಲಾಗುತ್ತದೆ:

  • Single Point Registration Scheme (SPRS) ಅಡಿಯಲ್ಲಿ ನಿಗದಿಪಡಿಸಿದ ಹಣಕಾಸು ಮಿತಿಯ 300%
  • ಕಳೆದ ವರ್ಷದ ಟರ್ನೋವರ್ (Audit ಮಾಡಲಾದ ಅಥವಾ Chartered Accountant ದೃಢೀಕರಿಸಿದ ವರದಿ ಆಧಾರದಲ್ಲಿ)

2. ಟರ್ನೋವರ್ ಹೆಚ್ಚಾದರೆ ಏನು?

ಯಾವುದೇ ಆರ್ಥಿಕ ವರ್ಷದಲ್ಲಿ ಯೂನಿಟ್‌ನ ಟರ್ನೋವರ್ ಗಣನೀಯವಾಗಿ ಹೆಚ್ಚಾದರೆ (Chartered Accountant ದೃಢೀಕರಣದೊಂದಿಗೆ):

  • ಆ ಟರ್ನೋವರ್, ಕಳೆದ ವರ್ಷದ ಟರ್ನೋವರ್ ಅಥವಾ SPRS ಮಿತಿಯ 300% — ಈ ಮೂರು ಅಂಶಗಳಲ್ಲಿ ಯಾವುದು ಹೆಚ್ಚು ಇದೆಯೋ ಅದನ್ನು ಮಿತಿಯಾಗಿ ಪರಿಗಣಿಸಲಾಗುತ್ತದೆ

3. ಯೂನಿಟ್ ಸಾಮರ್ಥ್ಯ ಕೂಡ ಪರಿಗಣನೆ

ಟೆಂಡರ್ ಮಿತಿಯನ್ನು ನಿಗದಿಪಡಿಸುವಾಗ:

  • ಯೂನಿಟ್‌ನ ಉತ್ಪಾದನಾ ಸಾಮರ್ಥ್ಯ (Operating Capacity)
  • ಸ್ಥಾಪಿತ ಸಾಮರ್ಥ್ಯ ಇವನ್ನೂ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ

4. ಮಿತಿಯ ಮಾನ್ಯತೆ

  • ನಿಗದಿಪಡಿಸಿದ ಮಿತಿ 1 ವರ್ಷಕ್ಕೆ ಮಾನ್ಯವಾಗಿರುತ್ತದೆ
  • ಪ್ರತಿ ವರ್ಷ review ಮತ್ತು renewal ಮಾಡಲಾಗುತ್ತದೆ

5. Consortia ಯಲ್ಲಿ ಮಿತಿ ಹೇಗೆ ನಿಗದಿ?

ಒಂದಕ್ಕಿಂತ ಹೆಚ್ಚು ಯೂನಿಟ್‌ಗಳು Consortia ಆಗಿ ಕಾರ್ಯನಿರ್ವಹಿಸಿದರೆ:

  • ಪ್ರತಿ ಯೂನಿಟ್‌ಗೆ ನಿಗದಿಪಡಿಸಿದ ಮಿತಿಗಳನ್ನು ಸೇರಿಸಿ ಒಟ್ಟು ಮಿತಿ ನಿಗದಿಪಡಿಸಲಾಗುತ್ತದೆ
  • ಈ ಮಿತಿಗೂ 1 ವರ್ಷದ ಮಾನ್ಯತೆ ಇರುತ್ತದೆ ಮತ್ತು ಪ್ರತಿ ವರ್ಷ review ಮಾಡಲಾಗುತ್ತದೆ

Business: ಲಾಭಗಳು ಮತ್ತು ಅರ್ಹತೆ – NSIC ಟೆಂಡರ್ ಮಾರ್ಕೆಟಿಂಗ್ ಯೋಜನೆ

1. ಲಾಭಗಳು

  • ಸರ್ಕಾರಿ ಹಾಗೂ ಖಾಸಗಿ ಟೆಂಡರ್‌ಗಳಲ್ಲಿ ಭಾಗವಹಿಸಲು ಯೂನಿಟ್‌ಗಳಿಗೆ ನೋಂದಣಿ (Enlistment) ಅವಕಾಶ
  • Consortia ಸದಸ್ಯರಿಗೆ ಸೇವಾ ಶುಲ್ಕದಲ್ಲಿ 0.5% ರಿಯಾಯಿತಿ ಸಿಗುತ್ತದೆ

2. ಅರ್ಹತೆ

  • NSIC Single Point Registration Scheme (SPRS) ಅಡಿಯಲ್ಲಿ ನೋಂದಾಯಿತ Micro & Small Enterprises ಈ ಯೋಜನೆಗೆ ಅರ್ಹರು
  • ಅಥವಾ NSIC SPRS ಅಡಿಯಲ್ಲಿ ನೋಂದಣಿ ಪಡೆಯಲು ಅರ್ಜಿ ಸಲ್ಲಿಸಿರುವ Micro & Small Enterprises ಕೂಡ ಅರ್ಹರಾಗಿರುತ್ತಾರೆ (ಅಗತ್ಯ ದಾಖಲೆಗಳೊಂದಿಗೆ)
  • ಟೆಂಡರ್ ಸಲ್ಲಿಸುವ ಮೊದಲು ಯೂನಿಟ್/ಫ್ಯಾಕ್ಟರಿ ಪರಿಶೀಲನೆ (Inspection) ಕಡ್ಡಾಯವಾಗಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ:

ಆಫ್‌ಲೈನ್ ವಿಧಾನ:

Step 01:

  • ನಿರ್ದಿಷ್ಟ ನಮೂನೆ (Annexure A ಮತ್ತು A-1) ನಲ್ಲಿ ನೀಡಿರುವ ಅರ್ಜಿ ಫಾರ್ಮ್ ಅನ್ನು Micro & Small Enterprise (MSE) ಭರ್ತಿ ಮಾಡಿ ಸಲ್ಲಿಸಬೇಕು
  • ಅರ್ಜಿ ಫಾರ್ಮ್ ಅನ್ನು ಸಂಸ್ಥೆಯ ಅಧಿಕೃತ ವ್ಯಕ್ತಿಗಳು (Proprietor / Partner / Director) ಸಹಿ ಮಾಡಿರಬೇಕು
  • ಫಾರ್ಮ್‌ನಲ್ಲಿ ಕೇಳಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಕೂಡ ಜೊತೆಯಲ್ಲಿ ಸೇರಿಸಬೇಕು

Step 02:

  • ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ನಂತರ ಸಂಬಂಧಿತ ಅಥವಾ ಪ್ರಾದೇಶಿಕ NSIC ಶಾಖಾ ಕಚೇರಿಗೆ (Branch Office) ಕಳುಹಿಸಬೇಕು.

Business: ಅಗತ್ಯ ದಾಖಲೆಗಳು

  • ಸಂಸ್ಥೆಯ Proprietor / Partner / Director / Society ಸದಸ್ಯರ ಪ್ರತಿಯೊಬ್ಬರ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ವಿಳಾಸ ಪುರಾವೆ
  • G.P. Registration Certificate ನ self-attested ಪ್ರತಿಗಳು
  • Power of Attorney (Annexure – B) / Board Resolution (Annexure – C) / Society Resolution (Annexure – H)
    NSIC ಜೊತೆ ನೋಂದಣಿ, ಟೆಂಡರ್ ಭಾಗವಹಿಸುವಿಕೆ ಮತ್ತು Consortia ರಚನೆಗಾಗಿ ಅಧಿಕೃತ ಅನುಮತಿ ನೀಡುವ ದಾಖಲೆ
  • ಬ್ಯಾಂಕ್ ದೃಢೀಕರಿಸಿದ (attested) ಅಧಿಕಾರ ಹೊಂದಿದ ವ್ಯಕ್ತಿಗಳ ಸಹಿ ಮಾದರಿ (Specimen Signature)
  • ಇತ್ತೀಚಿನ ಸರಬರಾಜು ಆರ್ಡರ್‌ಗಳ (Supply Orders) ಪ್ರತಿಗಳು.

ಸಣ್ಣ ಉದ್ಯಮಿಗಳು ದೊಡ್ಡ ಮಟ್ಟದಲ್ಲಿ ಬೆಳೆಯಲು ಇದು ಒಂದು ಗೇಮ್ ಚೇಂಜರ್ ಯೋಜನೆ, ನೀವು business ಮಾಡುತ್ತಿದ್ದರೆ ಈ ಅವಕಾಶ ತಪ್ಪಿಸಿಕೊಳ್ಳಬೇಡಿ!

ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
Application Form
ಇನ್ನಷ್ಟು ಓದಿ: AP: ಆಂಧ್ರಪ್ರದೇಶ ಹೈಕೋರ್ಟ್‌ನಲ್ಲಿ 300 ಹುದ್ದೆಗಳ ಭರ್ತಿ: ಮಾರ್ಚ್ 30 ರಿಂದ ಅರ್ಜಿ ಆರಂಭ – ಸಂಪೂರ್ಣ ವಿವರಗಳು ಇಲ್ಲಿ!

1 thought on “Business Startup growth 2026: ಸಣ್ಣ ಉದ್ಯಮಿಗಳಿಗೆ ದೊಡ್ಡ ಅವಕಾಶ! NSIC ಕಾಂಸಾರ್ಟಿಯ ಯೋಜನೆ ಮೂಲಕ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಿ”

Leave a Comment