PM Vidyalaxmi Scheme 2026: ಹಣದ ಕೊರತೆಯಿಂದ ಭಾರತದಲ್ಲಿ ಎಷ್ಟೋ ಮಕ್ಕಳು ಶಿಕ್ಷಣವನ್ನು ಕೈ ಬಿಟ್ಟು ಇಷ್ಟವಿಲ್ಲದ ಕೆಲಸಕ್ಕೆ ಹೋಗುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ, ಈಗ 21ನೇ ಶತಮಾನದಲ್ಲೂ ಕೂಡ ಈ ಪರಿಸ್ಥಿತಿಯನ್ನು ನಾವು ಎದುರಿಸುತ್ತಲೇ ಇದ್ದೇವೆ, ಈ ಕಾರಣದಿಂದ ಭಾರತ ಸರ್ಕಾರವು ಶಿಕ್ಷಣ ಸಚಿವಾಲಯದ ವತಿಯಿಂದ ಪ್ರಾರಂಭಿಸಿದ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯು ವಿದ್ಯಾರ್ಥಿಗಳಿಗೆ ದೊಡ್ಡ ಸಹಾಯವಾಗಲಿದೆ.
ಈ ಯೋಜನೆಯ ಮುಖ್ಯ ಉದ್ದೇಶವು ಹಣದ ಕೊರತೆಯಿಂದ ಯಾವುದೇ ವಿದ್ಯಾರ್ಥಿಯು ತನ್ನ ಉನ್ನತ ಶಿಕ್ಷಣವನ್ನು ಕಳೆದುಕೊಳ್ಳಬಾರದು ತಮ್ಮ ಓದಿನ ಕನಸನ್ನು ಈಡೇರಿಸಿಕೊಳ್ಳಬೇಕೆಂಬುದು, ವಿಶೇಷವಾಗಿ ಈ ಯೋಜನೆಯಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಮತ್ತು ಜಾಮೀನು ಇಲ್ಲದೆ ಶಿಕ್ಷಣ ಸಾಲ ಪಡೆಯಬಹುದು.
ಇತ್ತೀಚಿನ ದಿನಗಳಲ್ಲಿ ಸಾಲ ಪಡೆಯಲು ಬ್ಯಾಂಕ್ ನಲ್ಲಿ ಗ್ಯಾರಂಟಿಯಾಗಿ ಮನೆಯ ಪತ್ರ ಅಥವಾ ಜಾಮೀನು ಏನಾದರೂ ಒಂದು ಗ್ಯಾರೆಂಟಿಯನ್ನು ಕೊಡಲೇಬೇಕಾಗುತ್ತದೆ, ಇಂತಹ ಸ್ಥಿತಿಯಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಉಡುಗೊರೆಯಾಗಿ ಕೊಟ್ಟಿದೆ.
PM ವಿದ್ಯಾಲಕ್ಷ್ಮಿ ಯೋಜನೆಯ ಪ್ರಮುಖ ಲಾಭಗಳು:
- ಜಾಮೀನು ಅಥವಾ ಗ್ಯಾರಂಟಿ ಇಲ್ಲದೆ ಶಿಕ್ಷಣ ಸಾಲ ಪಡೆಯಬಹುದು.
- ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ಲ್ಯಾಪ್ಟಾಪ್ ಸೇರಿದಂತೆ ಎಲ್ಲಾ ಖರ್ಚುಗಳಿಗೆ ಸಾಲ ದೊರೆಯುತ್ತದೆ.
- ₹10 ಲಕ್ಷದವರೆಗೆ ಕೇವಲ 3% ಬಡ್ಡಿ ಸಬ್ಸಿಡಿ ದೊರೆಯುತ್ತದೆ.
- ₹7.5 ಲಕ್ಷದವರೆಗೆ 75% ಸರ್ಕಾರದ ಗ್ಯಾರಂಟಿ ಭದ್ರತೆ.
- 15 ವರ್ಷಗಳವರೆಗೆ ಮರುಪಾವತಿಗೆ ಕಾಲಾವಧಿ ನೀಡಿದ್ದರೆ, ಇದು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ.
- ಈ ಯೋಜನೆಯು ಸಂಪೂರ್ಣ ಆನ್ಲೈನ್ ಅರ್ಜಿ ಪ್ರಕ್ರಿಯೆಯಾಗಿದೆ.
- ಕುಟುಂಬದ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ ಹೆಚ್ಚು ಲಾಭ ಸಿಗುತ್ತದೆ.
ಯಾರು ಅರ್ಜಿ ಹಾಕಲು ಅರ್ಹರು:
-
ಅರ್ಜಿ ಹಾಕುವವರು ಭಾರತೀಯ ನಾಗರಿಕರಾಗಿರಬೇಕು.
-
ಮೆರಿಟ್ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
-
ದೇಶದ ಪ್ರಮುಖ 860 ಉನ್ನತ ಶಿಕ್ಷಣ ಸಂಸ್ಥೆಯ ಯಾವುದಾದರೂ ಒಂದರಲ್ಲಿ ಪ್ರವೇಶ ಪಡೆದಿರಬೇಕು.
-
ನಿರ್ವಹಣಾ ಕೋಟಾ (Management quota) ಮೂಲಕ ಪ್ರವೇಶ ಪಡೆದವರಾಗಿರಬಾರದು.
-
ಕುಟುಂಬದ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದವರಿಗೆ ಹೆಚ್ಚಿನ ಅವಕಾಶ.
-
ಇತರ ಸರ್ಕಾರಿ ವಿದ್ಯಾರ್ಥಿವೇತನ ಪಡೆಯುತ್ತಿರಬಾರದು.
ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳು (QHEIs) – ಅರ್ಹತೆ
PM ವಿದ್ಯಾ ಲಕ್ಷ್ಮಿ ಯೋಜನೆಯಡಿ ಕೆಳಗಿನ ಶಿಕ್ಷಣ ಸಂಸ್ಥೆಗಳು ಮಾತ್ರ ಅರ್ಹವಾಗಿವೆ:
- ಶಿಕ್ಷಣ ಸಚಿವಾಲಯ ಪ್ರಕಟಿಸುವ ಇತ್ತೀಚಿನ ರಾಷ್ಟ್ರೀಯ ಶ್ರೇಯಾಂಕ (NIRF) ಪಟ್ಟಿಯಲ್ಲಿ ಒಟ್ಟು / ವಿಭಾಗ / ವಿಷಯ ಆಧಾರಿತವಾಗಿ ಟಾಪ್ 100 ಸ್ಥಾನದಲ್ಲಿರುವ ಸಂಸ್ಥೆಗಳು
- ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿರುವ ಟಾಪ್ 200 ಸ್ಥಾನದಲ್ಲಿರುವ ಸಂಸ್ಥೆಗಳು.
- ಭಾರತ ಸರ್ಕಾರದ ಅಧೀನದಲ್ಲಿರುವ ಉಳಿದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಅರ್ಹವಾಗಿವೆ.
ಮುಖ್ಯ ಸೂಚನೆ
- ವಿದೇಶಿ ಶಿಕ್ಷಣ ಸಂಸ್ಥೆಗಳ ಭಾರತದಲ್ಲಿರುವ ಕ್ಯಾಂಪಸ್ಗಳಲ್ಲಿ ಓದುತ್ತಿದ್ದಾರೆ ಅರ್ಹರಾಗಿರುವುದಿಲ್ಲ.
- ಭಾರತೀಯ ಸಂಸ್ಥೆಗಳ ವಿದೇಶಿ ಕ್ಯಾಂಪಸ್ಗಳು ಕೂಡ ಅರ್ಹರಾಗಿರುವುದಿಲ್ಲ.
- ಸಂಪೂರ್ಣ ವಿದೇಶಿ ಶಿಕ್ಷಣ ಸಂಸ್ಥೆಗಳು ಈ ಯೋಜನೆ ಅನ್ವಯಿಸುವುದಿಲ್ಲ.
PM ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
ರಿಜಿಸ್ಟ್ರೇಷನ್ ವಿಧಾನ:
ಹಂತ 1: ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
ಹಂತ 2: ಮೇಲಿನ ಮೆನುದಲ್ಲಿ “ಲಾಗಿನ್” ಮೇಲೆ ಕ್ಲಿಕ್ ಮಾಡಿ, ನಂತರ “ವಿದ್ಯಾರ್ಥಿ ಲಾಗಿನ್” ಆಯ್ಕೆ ಮಾಡಿ, ಮುಂದಿನ ಪುಟದಲ್ಲಿ “ಖಾತೆ ಸೃಷ್ಟಿಸಿ” ಮೇಲೆ ಕ್ಲಿಕ್ ಮಾಡಿ.
ಹಂತ 3: ವಿದ್ಯಾರ್ಥಿಗಳು ಆಧಾರ್ ಮೂಲಕ ನೋಂದಣಿ ಮಾಡಬೇಕು ಇದರಿಂದ ಶಿಕ್ಷಣ ಸಾಲ, ಬಡ್ಡಿ, ಸಬ್ಸಿಡಿ ಮತ್ತು ಸಾಲ ಭದ್ರತಾ ಲಾಭ ಪಡೆಯಬಹುದು.
ಹಂತ 4: ನೋಂದಣಿ ಫಾರ್ಮ್ನಲ್ಲಿ ಕೆಳಗಿನ ವಿವರಗಳನ್ನು ನಮೂದಿಸಿ:
- ಅರ್ಜಿದಾರರ ಹೆಸರು
- ಮೊಬೈಲ್ ಸಂಖ್ಯೆ
- ಇಮೇಲ್ ವಿಳಾಸ,
- ಮೊಬೈಲ್ ಮತ್ತು ಇಮೇಲ್ ಅನ್ನು OTP ಮೂಲಕ ದೃಢೀಕರಿಸಿ. ಕನಿಷ್ಠ 8 ಅಕ್ಷರಗಳ ಪಾಸ್ವರ್ಡ್ ರಚಿಸಿ (ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಚಿಹ್ನೆಗಳೊಂದಿಗೆ)
ಹಂತ 5: ಪಾಸ್ವರ್ಡ್ ಅನ್ನು ದೃಢೀಕರಿಸಿ, ಕ್ಯಾಪ್ಚಾ ಕೋಡ್ ನಮೂದಿಸಿ, ನಿಯಮಗಳು ಮತ್ತು ಗೌಪ್ಯತೆ ಒಪ್ಪಿ “submit” ಮೇಲೆ ಕ್ಲಿಕ್ ಮಾಡಿ.
ನೋಂದಣಿ ಪೂರ್ಣಗೊಂಡ ನಂತರ, ನಿಮಗೆ SMS / ಇಮೇಲ್ / ವಾಟ್ಸಾಪ್ ಮೂಲಕ ದೃಢೀಕರಣ ಸಂದೇಶ ಬರುತ್ತದೆ.
ಶಿಕ್ಷಣ ಸಾಲಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು?
ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವುದು ತುಂಬಾ ಸುಲಭ! ಕೆಳಗಿನ ಹಂತಗಳನ್ನು ಅನುಸರಿಸಿ:
- ಜಾಲತಾಣಕ್ಕೆ ಭೇಟಿ ನೀಡಿ ಅಧಿಕೃತ ವೆಬ್ಸೈಟ್ ತೆರೆಯಿರಿ
- ಲಾಗಿನ್ ಮಾಡಿ
- “ಲಾಗಿನ್” → “ವಿದ್ಯಾರ್ಥಿ ಲಾಗಿನ್” ಆಯ್ಕೆ ಮಾಡಿ
- ನಿಮ್ಮ ಇಮೇಲ್ (ಬಳಕೆದಾರ ಹೆಸರು) ಮತ್ತು ಪಾಸ್ವರ್ಡ್ ನಮೂದಿಸಿ
- ಕ್ಯಾಪ್ಚಾ ನಮೂದಿಸಿ, OTP ಮೂಲಕ ಲಾಗಿನ್ ಪೂರ್ಣಗೊಳಿಸಿ
- ಅರ್ಜಿ ಪ್ರಾರಂಭಿಸಿ “ಶಿಕ್ಷಣ ಸಾಲಕ್ಕೆ ಅರ್ಜಿ” ಮೇಲೆ ಕ್ಲಿಕ್ ಮಾಡಿ
- ಎಲ್ಲಾ ಕಡ್ಡಾಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಮಗೆ ಇಷ್ಟವಾದ ಬ್ಯಾಂಕ್ ಮತ್ತು ಶಾಖೆ ಆಯ್ಕೆ ಮಾಡಿ ಎಲ್ಲಾ ವಿವರಗಳನ್ನು ಚೆನ್ನಾಗಿ ಪರಿಶೀಲಿಸಿ.
- ನಿಯಮಗಳು ಒಪ್ಪಿ, “Final Submit” ಮೇಲೆ ಕ್ಲಿಕ್ ಮಾಡಿ ಅರ್ಜಿಯ ನಂತರ ನಿಮಗೆ ದೃಢೀಕರಣ ಸಂದೇಶ ಬರುತ್ತದೆ ಸೇವ್ ಮಾಡಿ ಇಟ್ಟುಕೊಳ್ಳಿ.
ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವಿಳಾಸ ಪ್ರಮಾಣಪತ್ರ
- ಅಂಕಪಟ್ಟಿಗಳು
- ಪ್ರವೇಶ ಪತ್ರ
- ಆದಾಯ ಪ್ರಮಾಣಪತ್ರ
ಅರ್ಜಿಯ ಸ್ಥಿತಿ ಪರಿಶೀಲಿಸುವುದು ಹೇಗೆ?
ಲಾಗಿನ್ ಮಾಡಿ “ಅರ್ಜಿಯ ಸ್ಥಿತಿ” ವಿಭಾಗಕ್ಕೆ ಹೋಗಿ ನಿಮ್ಮ ಅರ್ಜಿಯ ಪ್ರಗತಿಯನ್ನು ನೋಡಬಹುದು
ಬಡ್ಡಿ ಸಬ್ಸಿಡಿ ಪಡೆಯುವುದು ಹೇಗೆ?
- ಸಾಲ ಮಂಜೂರಾದ ನಂತರ ನಿಮ್ಮ ಖಾತೆಗೆ ಲಾಗಿನ್ ಆಗಿ ಅರ್ಜಿ ಹಾಕಬೇಕು.
- “ಬಡ್ಡಿ ಸಬ್ಸಿಡಿಗೆ ಅರ್ಜಿ” ಮೇಲೆ ಕ್ಲಿಕ್ ಮಾಡಿ, ಆದಾಯ ಪ್ರಮಾಣಪತ್ರವನ್ನು ಅಪ್ಲೋಡ್ ಮಾಡಬೇಕು
- “Claim Interest Subvention” ಆಯ್ಕೆ ಮಾಡಿ, ಅಗತ್ಯ ಮಾಹಿತಿಯನ್ನು ನಮೂದಿಸಿ.
- ಆದಾಯ ಪ್ರಮಾಣಪತ್ರ ಅಥವಾ ಸಂಸ್ಥೆಯ ಪ್ರಮಾಣಪತ್ರ (Annexure 6) ಅಪ್ಲೋಡ್ ಮಾಡಿ ಫಾರ್ಮ್ ಸಲ್ಲಿಸಿ.
- 3% ಬಡ್ಡಿ ರಿಯಾಯಿತಿ ಪಡೆಯಬಹುದು, SMS / ಇಮೇಲ್ / ವಾಟ್ಸಾಪ್ ಮೂಲಕ ದೃಢೀಕರಣ ಬರುತ್ತದೆ.
ದೂರು ಸಲ್ಲಿಸುವ ವಿಧಾನ:
PM ವಿದ್ಯಾ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ತರಹದ ಗೊಂದಲಗಳು ಇದ್ದರೂ ಅಥವಾ ಅಪ್ಲಿಕೇಶನ್ ಸಲ್ಲಿಸಿದ ಮೇಲೆ ಏನಾದರೂ ಗೊಂದಲಗಳು / ತೊಂದರೆಗಳು ಎದುರಾದರೂ ಕೆಳಗೆ ಕೊಟ್ಟಿರುವ ಹಂತದ ರೀತಿಯಲ್ಲಿ ದೂರು ಸಲ್ಲಿಸಬಹುದು.
ಹಂತ 1: ದೂರು ವಿಭಾಗಕ್ಕೆ ಹೋಗಿ, “Initiate Grievance” ಆಯ್ಕೆ ಮಾಡಿ, “Register New Complaint” ಕ್ಲಿಕ್ ಮಾಡಿ.
ಹಂತ 2: ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ, ಸಮಸ್ಯೆಯ ಪ್ರಕಾರ ಆಯ್ಕೆ ಮಾಡಿ ಸಂಬಂಧಿತ ಬ್ಯಾಂಕ್ ಆಯ್ಕೆ ಮಾಡಿ.
ಹಂತ 3: ನಿಮ್ಮ ಸಮಸ್ಯೆಯನ್ನು ವಿವರವಾಗಿ ಬರೆದು ದಾಖಲೆಗಳನ್ನು ಅಪ್ಲೋಡ್ ಮಾಡಿ (PDF/JPEG/PNG – 200KB ಒಳಗೆ), ದೂರು ಸಲ್ಲಿಸಿದ ನಂತರ ದೂರು ಗುರುತು ಸಂಖ್ಯೆ (Grievance ID) ಸಿಗುತ್ತದೆ.
“View Reply” ನಲ್ಲಿ ಸ್ಥಿತಿ ಪರಿಶೀಲಿಸಬಹುದು
| Read More: NIC Recruitment 2026: ₹1.77 ಲಕ್ಷ ಸಂಬಳದ 243 Scientist-B ಹುದ್ದೆಗಳಿಗೆ ನೇಮಕಾತಿ – GATE ಇದ್ದರೆ ಸಾಕು! |
ದೂರು ಪರಿಹಾರ ಸಂಪರ್ಕ:
ಯಾವುದೇ ಸಮಸ್ಯೆಗೆ ಸಂಪರ್ಕಿಸಿ:
- ಟೋಲ್ ಫ್ರೀ ಸಂಖ್ಯೆ: 1800 1031
- ದೂರವಾಣಿ: 080-22533876
- ಇಮೇಲ್: hoel@canarabank.com, hogps@canarabank.com, support@pmvidyalaxmi.co.in
| ಅರ್ಹತೆಯನ್ನು ಪರಿಶೀಲಿಸಿ (Check Eligibility) |
| ವಿದ್ಯಾರ್ಥಿ ನೋಂದಣಿ |
| ಅಧಿಕೃತ ವೆಬ್ಸೈಟ್ |
| Read More: Business Startup growth 2026: ಸಣ್ಣ ಉದ್ಯಮಿಗಳಿಗೆ ದೊಡ್ಡ ಅವಕಾಶ! NSIC ಕಾಂಸಾರ್ಟಿಯ ಯೋಜನೆ ಮೂಲಕ ಸರ್ಕಾರಿ ಟೆಂಡರ್ಗಳಲ್ಲಿ ಭಾಗವಹಿಸಿ |
2 thoughts on “PM Vidyalaxmi Scheme 2026: ಜಾಮೀನು ಇಲ್ಲದೆ ₹10 ಲಕ್ಷವರೆಗೆ ಶಿಕ್ಷಣ ಸಾಲ! ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ”