Telegram Join My Telegram WhatsApp Join My WhatsApp

PM Vidyalaxmi Scheme 2026: ಜಾಮೀನು ಇಲ್ಲದೆ ₹10 ಲಕ್ಷವರೆಗೆ ಶಿಕ್ಷಣ ಸಾಲ! ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ

PM Vidyalaxmi Scheme 2026: ಹಣದ ಕೊರತೆಯಿಂದ ಭಾರತದಲ್ಲಿ ಎಷ್ಟೋ ಮಕ್ಕಳು ಶಿಕ್ಷಣವನ್ನು ಕೈ ಬಿಟ್ಟು ಇಷ್ಟವಿಲ್ಲದ ಕೆಲಸಕ್ಕೆ ಹೋಗುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ, ಈಗ 21ನೇ ಶತಮಾನದಲ್ಲೂ ಕೂಡ ಈ ಪರಿಸ್ಥಿತಿಯನ್ನು ನಾವು ಎದುರಿಸುತ್ತಲೇ ಇದ್ದೇವೆ, ಈ ಕಾರಣದಿಂದ ಭಾರತ ಸರ್ಕಾರವು ಶಿಕ್ಷಣ ಸಚಿವಾಲಯದ ವತಿಯಿಂದ ಪ್ರಾರಂಭಿಸಿದ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯು ವಿದ್ಯಾರ್ಥಿಗಳಿಗೆ ದೊಡ್ಡ ಸಹಾಯವಾಗಲಿದೆ.

ಈ ಯೋಜನೆಯ ಮುಖ್ಯ ಉದ್ದೇಶವು ಹಣದ ಕೊರತೆಯಿಂದ ಯಾವುದೇ ವಿದ್ಯಾರ್ಥಿಯು ತನ್ನ ಉನ್ನತ ಶಿಕ್ಷಣವನ್ನು ಕಳೆದುಕೊಳ್ಳಬಾರದು ತಮ್ಮ ಓದಿನ ಕನಸನ್ನು ಈಡೇರಿಸಿಕೊಳ್ಳಬೇಕೆಂಬುದು, ವಿಶೇಷವಾಗಿ ಈ ಯೋಜನೆಯಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಮತ್ತು ಜಾಮೀನು ಇಲ್ಲದೆ ಶಿಕ್ಷಣ ಸಾಲ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಸಾಲ ಪಡೆಯಲು ಬ್ಯಾಂಕ್ ನಲ್ಲಿ ಗ್ಯಾರಂಟಿಯಾಗಿ ಮನೆಯ ಪತ್ರ ಅಥವಾ ಜಾಮೀನು ಏನಾದರೂ ಒಂದು ಗ್ಯಾರೆಂಟಿಯನ್ನು ಕೊಡಲೇಬೇಕಾಗುತ್ತದೆ, ಇಂತಹ ಸ್ಥಿತಿಯಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ಉಡುಗೊರೆಯಾಗಿ ಕೊಟ್ಟಿದೆ.

PM ವಿದ್ಯಾಲಕ್ಷ್ಮಿ ಯೋಜನೆಯ ಪ್ರಮುಖ ಲಾಭಗಳು:

  • ಜಾಮೀನು ಅಥವಾ ಗ್ಯಾರಂಟಿ ಇಲ್ಲದೆ ಶಿಕ್ಷಣ ಸಾಲ ಪಡೆಯಬಹುದು.
  • ಕಾಲೇಜು ಶುಲ್ಕ, ಹಾಸ್ಟೆಲ್ ಶುಲ್ಕ, ಲ್ಯಾಪ್‌ಟಾಪ್ ಸೇರಿದಂತೆ ಎಲ್ಲಾ ಖರ್ಚುಗಳಿಗೆ ಸಾಲ ದೊರೆಯುತ್ತದೆ.
  • ₹10 ಲಕ್ಷದವರೆಗೆ ಕೇವಲ 3% ಬಡ್ಡಿ ಸಬ್ಸಿಡಿ ದೊರೆಯುತ್ತದೆ.
  • ₹7.5 ಲಕ್ಷದವರೆಗೆ 75% ಸರ್ಕಾರದ ಗ್ಯಾರಂಟಿ ಭದ್ರತೆ.
  • 15 ವರ್ಷಗಳವರೆಗೆ ಮರುಪಾವತಿಗೆ  ಕಾಲಾವಧಿ ನೀಡಿದ್ದರೆ, ಇದು ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ.
  • ಈ ಯೋಜನೆಯು ಸಂಪೂರ್ಣ ಆನ್‌ಲೈನ್ ಅರ್ಜಿ ಪ್ರಕ್ರಿಯೆಯಾಗಿದೆ.
  • ಕುಟುಂಬದ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದರೆ ಹೆಚ್ಚು ಲಾಭ ಸಿಗುತ್ತದೆ.

ಯಾರು ಅರ್ಜಿ ಹಾಕಲು ಅರ್ಹರು:

  • ಅರ್ಜಿ ಹಾಕುವವರು ಭಾರತೀಯ ನಾಗರಿಕರಾಗಿರಬೇಕು.

  • ಮೆರಿಟ್ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.

  • ದೇಶದ ಪ್ರಮುಖ 860 ಉನ್ನತ ಶಿಕ್ಷಣ ಸಂಸ್ಥೆಯ ಯಾವುದಾದರೂ ಒಂದರಲ್ಲಿ ಪ್ರವೇಶ ಪಡೆದಿರಬೇಕು.

  • ನಿರ್ವಹಣಾ ಕೋಟಾ (Management quota) ಮೂಲಕ ಪ್ರವೇಶ ಪಡೆದವರಾಗಿರಬಾರದು.

  • ಕುಟುಂಬದ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇದ್ದವರಿಗೆ ಹೆಚ್ಚಿನ ಅವಕಾಶ.

  • ಇತರ ಸರ್ಕಾರಿ ವಿದ್ಯಾರ್ಥಿವೇತನ ಪಡೆಯುತ್ತಿರಬಾರದು.

ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳು (QHEIs) – ಅರ್ಹತೆ

PM ವಿದ್ಯಾ ಲಕ್ಷ್ಮಿ ಯೋಜನೆಯಡಿ ಕೆಳಗಿನ ಶಿಕ್ಷಣ ಸಂಸ್ಥೆಗಳು ಮಾತ್ರ ಅರ್ಹವಾಗಿವೆ:

  • ಶಿಕ್ಷಣ ಸಚಿವಾಲಯ ಪ್ರಕಟಿಸುವ ಇತ್ತೀಚಿನ ರಾಷ್ಟ್ರೀಯ ಶ್ರೇಯಾಂಕ (NIRF) ಪಟ್ಟಿಯಲ್ಲಿ ಒಟ್ಟು / ವಿಭಾಗ / ವಿಷಯ ಆಧಾರಿತವಾಗಿ ಟಾಪ್ 100 ಸ್ಥಾನದಲ್ಲಿರುವ ಸಂಸ್ಥೆಗಳು
  • ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಆಡಳಿತದಲ್ಲಿರುವ ಟಾಪ್ 200 ಸ್ಥಾನದಲ್ಲಿರುವ ಸಂಸ್ಥೆಗಳು.
  • ಭಾರತ ಸರ್ಕಾರದ ಅಧೀನದಲ್ಲಿರುವ ಉಳಿದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಕೂಡ ಅರ್ಹವಾಗಿವೆ.

ಮುಖ್ಯ ಸೂಚನೆ

  • ವಿದೇಶಿ ಶಿಕ್ಷಣ ಸಂಸ್ಥೆಗಳ ಭಾರತದಲ್ಲಿರುವ ಕ್ಯಾಂಪಸ್‌ಗಳಲ್ಲಿ ಓದುತ್ತಿದ್ದಾರೆ ಅರ್ಹರಾಗಿರುವುದಿಲ್ಲ.
  • ಭಾರತೀಯ ಸಂಸ್ಥೆಗಳ ವಿದೇಶಿ ಕ್ಯಾಂಪಸ್‌ಗಳು ಕೂಡ ಅರ್ಹರಾಗಿರುವುದಿಲ್ಲ.
  • ಸಂಪೂರ್ಣ ವಿದೇಶಿ ಶಿಕ್ಷಣ ಸಂಸ್ಥೆಗಳು ಈ ಯೋಜನೆ ಅನ್ವಯಿಸುವುದಿಲ್ಲ.

PM ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

ರಿಜಿಸ್ಟ್ರೇಷನ್ ವಿಧಾನ:

ಹಂತ 1: ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ

ಹಂತ 2: ಮೇಲಿನ ಮೆನುದಲ್ಲಿ “ಲಾಗಿನ್” ಮೇಲೆ ಕ್ಲಿಕ್ ಮಾಡಿ, ನಂತರ “ವಿದ್ಯಾರ್ಥಿ ಲಾಗಿನ್” ಆಯ್ಕೆ ಮಾಡಿ, ಮುಂದಿನ ಪುಟದಲ್ಲಿ “ಖಾತೆ ಸೃಷ್ಟಿಸಿ” ಮೇಲೆ ಕ್ಲಿಕ್ ಮಾಡಿ.

ಹಂತ 3: ವಿದ್ಯಾರ್ಥಿಗಳು ಆಧಾರ್ ಮೂಲಕ ನೋಂದಣಿ ಮಾಡಬೇಕು ಇದರಿಂದ ಶಿಕ್ಷಣ ಸಾಲ, ಬಡ್ಡಿ, ಸಬ್ಸಿಡಿ ಮತ್ತು ಸಾಲ ಭದ್ರತಾ ಲಾಭ ಪಡೆಯಬಹುದು.

ಹಂತ 4: ನೋಂದಣಿ ಫಾರ್ಮ್‌ನಲ್ಲಿ ಕೆಳಗಿನ ವಿವರಗಳನ್ನು ನಮೂದಿಸಿ:

  • ಅರ್ಜಿದಾರರ ಹೆಸರು
  • ಮೊಬೈಲ್ ಸಂಖ್ಯೆ
  • ಇಮೇಲ್ ವಿಳಾಸ,
  • ಮೊಬೈಲ್ ಮತ್ತು ಇಮೇಲ್ ಅನ್ನು OTP ಮೂಲಕ ದೃಢೀಕರಿಸಿ. ಕನಿಷ್ಠ 8 ಅಕ್ಷರಗಳ ಪಾಸ್ವರ್ಡ್ ರಚಿಸಿ (ಅಕ್ಷರಗಳು, ಸಂಖ್ಯೆಗಳು ಮತ್ತು ವಿಶೇಷ ಚಿಹ್ನೆಗಳೊಂದಿಗೆ)

ಹಂತ 5: ಪಾಸ್ವರ್ಡ್ ಅನ್ನು ದೃಢೀಕರಿಸಿ, ಕ್ಯಾಪ್ಚಾ ಕೋಡ್ ನಮೂದಿಸಿ, ನಿಯಮಗಳು ಮತ್ತು ಗೌಪ್ಯತೆ ಒಪ್ಪಿ “submit” ಮೇಲೆ ಕ್ಲಿಕ್ ಮಾಡಿ.

ನೋಂದಣಿ ಪೂರ್ಣಗೊಂಡ ನಂತರ, ನಿಮಗೆ SMS / ಇಮೇಲ್ / ವಾಟ್ಸಾಪ್ ಮೂಲಕ ದೃಢೀಕರಣ ಸಂದೇಶ ಬರುತ್ತದೆ.

ಶಿಕ್ಷಣ ಸಾಲಕ್ಕೆ ಅರ್ಜಿ ಹೇಗೆ ಸಲ್ಲಿಸಬೇಕು?

ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವುದು ತುಂಬಾ ಸುಲಭ! ಕೆಳಗಿನ ಹಂತಗಳನ್ನು ಅನುಸರಿಸಿ:

  • ಜಾಲತಾಣಕ್ಕೆ ಭೇಟಿ ನೀಡಿ ಅಧಿಕೃತ ವೆಬ್‌ಸೈಟ್ ತೆರೆಯಿರಿ
  • ಲಾಗಿನ್ ಮಾಡಿ
  • “ಲಾಗಿನ್” → “ವಿದ್ಯಾರ್ಥಿ ಲಾಗಿನ್” ಆಯ್ಕೆ ಮಾಡಿ
  • ನಿಮ್ಮ ಇಮೇಲ್ (ಬಳಕೆದಾರ ಹೆಸರು) ಮತ್ತು ಪಾಸ್ವರ್ಡ್ ನಮೂದಿಸಿ
  • ಕ್ಯಾಪ್ಚಾ ನಮೂದಿಸಿ, OTP ಮೂಲಕ ಲಾಗಿನ್ ಪೂರ್ಣಗೊಳಿಸಿ
  • ಅರ್ಜಿ ಪ್ರಾರಂಭಿಸಿ “ಶಿಕ್ಷಣ ಸಾಲಕ್ಕೆ ಅರ್ಜಿ” ಮೇಲೆ ಕ್ಲಿಕ್ ಮಾಡಿ
  • ಎಲ್ಲಾ ಕಡ್ಡಾಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ನಿಮಗೆ ಇಷ್ಟವಾದ ಬ್ಯಾಂಕ್ ಮತ್ತು ಶಾಖೆ ಆಯ್ಕೆ ಮಾಡಿ ಎಲ್ಲಾ ವಿವರಗಳನ್ನು ಚೆನ್ನಾಗಿ ಪರಿಶೀಲಿಸಿ.
  • ನಿಯಮಗಳು ಒಪ್ಪಿ, “Final Submit” ಮೇಲೆ ಕ್ಲಿಕ್ ಮಾಡಿ ಅರ್ಜಿಯ ನಂತರ ನಿಮಗೆ ದೃಢೀಕರಣ ಸಂದೇಶ ಬರುತ್ತದೆ ಸೇವ್ ಮಾಡಿ ಇಟ್ಟುಕೊಳ್ಳಿ.

ಅಗತ್ಯ ದಾಖಲೆಗಳು:

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ವಿಳಾಸ ಪ್ರಮಾಣಪತ್ರ
  • ಅಂಕಪಟ್ಟಿಗಳು
  • ಪ್ರವೇಶ ಪತ್ರ
  • ಆದಾಯ ಪ್ರಮಾಣಪತ್ರ

ಅರ್ಜಿಯ ಸ್ಥಿತಿ ಪರಿಶೀಲಿಸುವುದು ಹೇಗೆ?

ಲಾಗಿನ್ ಮಾಡಿ “ಅರ್ಜಿಯ ಸ್ಥಿತಿ” ವಿಭಾಗಕ್ಕೆ ಹೋಗಿ ನಿಮ್ಮ ಅರ್ಜಿಯ ಪ್ರಗತಿಯನ್ನು ನೋಡಬಹುದು

ಬಡ್ಡಿ ಸಬ್ಸಿಡಿ ಪಡೆಯುವುದು ಹೇಗೆ?

  • ಸಾಲ ಮಂಜೂರಾದ ನಂತರ ನಿಮ್ಮ ಖಾತೆಗೆ ಲಾಗಿನ್ ಆಗಿ ಅರ್ಜಿ ಹಾಕಬೇಕು.
  • “ಬಡ್ಡಿ ಸಬ್ಸಿಡಿಗೆ ಅರ್ಜಿ” ಮೇಲೆ ಕ್ಲಿಕ್ ಮಾಡಿ, ಆದಾಯ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು
  • “Claim Interest Subvention” ಆಯ್ಕೆ ಮಾಡಿ, ಅಗತ್ಯ ಮಾಹಿತಿಯನ್ನು ನಮೂದಿಸಿ.
  • ಆದಾಯ ಪ್ರಮಾಣಪತ್ರ ಅಥವಾ ಸಂಸ್ಥೆಯ ಪ್ರಮಾಣಪತ್ರ (Annexure 6) ಅಪ್‌ಲೋಡ್ ಮಾಡಿ ಫಾರ್ಮ್ ಸಲ್ಲಿಸಿ.
  • 3% ಬಡ್ಡಿ ರಿಯಾಯಿತಿ ಪಡೆಯಬಹುದು, SMS / ಇಮೇಲ್ / ವಾಟ್ಸಾಪ್ ಮೂಲಕ ದೃಢೀಕರಣ ಬರುತ್ತದೆ.

ದೂರು ಸಲ್ಲಿಸುವ ವಿಧಾನ:

PM ವಿದ್ಯಾ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವುದೇ ತರಹದ ಗೊಂದಲಗಳು ಇದ್ದರೂ ಅಥವಾ ಅಪ್ಲಿಕೇಶನ್ ಸಲ್ಲಿಸಿದ ಮೇಲೆ ಏನಾದರೂ ಗೊಂದಲಗಳು / ತೊಂದರೆಗಳು ಎದುರಾದರೂ ಕೆಳಗೆ ಕೊಟ್ಟಿರುವ ಹಂತದ ರೀತಿಯಲ್ಲಿ ದೂರು ಸಲ್ಲಿಸಬಹುದು.

ಹಂತ 1: ದೂರು ವಿಭಾಗಕ್ಕೆ ಹೋಗಿ, “Initiate Grievance” ಆಯ್ಕೆ ಮಾಡಿ, “Register New Complaint” ಕ್ಲಿಕ್ ಮಾಡಿ.

ಹಂತ 2: ನಿಮ್ಮ ಅರ್ಜಿ ಸಂಖ್ಯೆ ನಮೂದಿಸಿ, ಸಮಸ್ಯೆಯ ಪ್ರಕಾರ ಆಯ್ಕೆ ಮಾಡಿ ಸಂಬಂಧಿತ ಬ್ಯಾಂಕ್ ಆಯ್ಕೆ ಮಾಡಿ.

ಹಂತ 3: ನಿಮ್ಮ ಸಮಸ್ಯೆಯನ್ನು ವಿವರವಾಗಿ ಬರೆದು ದಾಖಲೆಗಳನ್ನು ಅಪ್‌ಲೋಡ್ ಮಾಡಿ (PDF/JPEG/PNG – 200KB ಒಳಗೆ), ದೂರು ಸಲ್ಲಿಸಿದ ನಂತರ ದೂರು ಗುರುತು ಸಂಖ್ಯೆ (Grievance ID) ಸಿಗುತ್ತದೆ. 

“View Reply” ನಲ್ಲಿ ಸ್ಥಿತಿ ಪರಿಶೀಲಿಸಬಹುದು

Read More: NIC Recruitment 2026: ₹1.77 ಲಕ್ಷ ಸಂಬಳದ 243 Scientist-B ಹುದ್ದೆಗಳಿಗೆ ನೇಮಕಾತಿ – GATE ಇದ್ದರೆ ಸಾಕು!

ದೂರು ಪರಿಹಾರ ಸಂಪರ್ಕ:

ಯಾವುದೇ ಸಮಸ್ಯೆಗೆ ಸಂಪರ್ಕಿಸಿ:

ಅರ್ಹತೆಯನ್ನು ಪರಿಶೀಲಿಸಿ (Check Eligibility)
ವಿದ್ಯಾರ್ಥಿ ನೋಂದಣಿ
ಅಧಿಕೃತ ವೆಬ್‌ಸೈಟ್

Read More: Business Startup growth 2026: ಸಣ್ಣ ಉದ್ಯಮಿಗಳಿಗೆ ದೊಡ್ಡ ಅವಕಾಶ! NSIC ಕಾಂಸಾರ್ಟಿಯ ಯೋಜನೆ ಮೂಲಕ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಿ

2 thoughts on “PM Vidyalaxmi Scheme 2026: ಜಾಮೀನು ಇಲ್ಲದೆ ₹10 ಲಕ್ಷವರೆಗೆ ಶಿಕ್ಷಣ ಸಾಲ! ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ”

Leave a Comment